ಭಟ್ಕಳ : ಗಡಿಪಾರು ನೋಟಿಸ್ ಜಾರಿಯಾಗಿರುವ ಹಿಂದೂ ಕಾರ್ಯಕರ್ತ, ಇಲ್ಲಿನ ಹನುಮಾನ ನಗರದ ಶ್ರೀನಿವಾಸ ನಾಯ್ಕ ಮನೆಗೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿಕೊಟ್ಟಿದ್ದಾರೆ.
ಇದನ್ನೂ ಓದಿ : ಶ್ರೀನಿವಾಸ ನಾಯ್ಕಗೆ ಭುವನೇಶ್ವರಿ ಕನ್ನಡ ಸಂಘ ಬೆಂಬಲ
ಶ್ರೀನಿವಾಸ ನಾಯ್ಕ ಮತ್ತವರ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಕಾನೂನಾತ್ಮಕವಾಗಿ ಮುಂದಿನ ನಡೆಗೆ ಜಿಲ್ಲಾ ನ್ಯಾಯಾಲಯದ ವಕೀಲರೊಂದಿಗೆ ಮಾತನಾಡಿ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುವುದಾಗಿ ಸುನೀಲ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಯ್ಕ, ನಾಮಧಾರಿ ಸಮಾಜದ ಮುಖಂಡ ಕೃಷ್ಣ ನಾಯ್ಕ ಆಸರಕೇರಿ, ಭಟ್ಕಳ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ವಕೀಲ ರಾಜೇಶ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ್ ನಾಯ್ಕ ಉಪಸ್ಥಿತರಿದ್ದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮಂಕಾಳ ವೈದ್ಯರಿಂದ ಆಡಳಿತ ದುರ್ಬಳಕೆ :
ಜಿಲ್ಲೆಯಲ್ಲಿ ಸಚಿವ ಮಂಕಾಳ್ ವೈದ್ಯರು ಇಲಾಖೆಯನ್ನು ತಮಗೆ ಬೇಕಾದ ಹಾಗೆ ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಆಡಳಿತ ನಡೆಸುತ್ತಿರುವಂತೆ ಕಾಣುತ್ತಿದೆ ಎಂದು ಸುನೀಲ ನಾಯ್ಕ ಆರೋಪಿಸಿದ್ದಾರೆ.
ಈ ಕುರಿತು ಫೇಸ್ಬುಕ್ ನ ತಮ್ಮ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಭಟ್ಕಳದಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅದೆಷ್ಟೋ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ, ಅವೆಲ್ಲವನ್ನೂ ಬಿಟ್ಟು ಹಿಂದೂ, ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸುತ್ತಿರುವುದನ್ನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.