ಭಟ್ಕಳ: ಹಿಂದೂ ಹೋರಾಟಗಾರ ಶ್ರೀನಿವಾಸ ನಾಯ್ಕ ಅವರ ಗಡಿಪಾರಿಗೆ ಸರಕಾರ ನೋಟಿಸ್ ನೀಡಿರುವುದು ಖಂಡನೀಯ. ತಕ್ಷಣ ಸರಕಾರ ನೋಟಿಸನ್ನು ಹಿಂಪಡೆಯಬೇಕು ಎಂದು ಬಿಜೆಪಿಯ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಉಸ್ತುವಾರಿ ಗೋವಿಂದ ನಾಯ್ಕ ಆಗ್ರಹಿಸಿದ್ದಾರೆ.

ಇದನ್ನೂ ಓದಿಶ್ರೀನಿವಾಸ ನಾಯ್ಕ ಮನೆಗೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿ

ಗೋವಿಂದ ನಾಯ್ಕ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೂ ಸಂಘಟನೆಯ ಪರವಾಗಿ ಕೆಲಸವನ್ನು ಮಾಡುವುದನ್ನೇ ಅಪರಾಧ ಎಂದು ಸರಕಾರ ಭಾವಿಸಿದಂತಿದೆ. ಕೊಲೆ, ಸುಲಿಗೆ, ಗಲಭೆ, ದಂಗೆಯಂತಹ ಪ್ರಕರಣದಲ್ಲಿ ಭಾಗಿಯಾಗದೆ ಹಿಂದು ಪರ ಹೋರಾಟ ಮಾಡಿದವನನ್ನೇ ಗುರಿಯಾಗಿಸಿ ನೋಟಿಸ್ ನೀಡಿರುವುದು ಹೋರಾಟವನ್ನು ಹತ್ತಿಕ್ಕುವ ತಂತ್ರ. ಇದು ಯಾವುದೇ ಕಾಲಕ್ಕೂ ಸಾಧ್ಯವಿಲ್ಲ. ಹಿಂದೂ ಸಂಘಟನೆಯ ಕಾರ್ಯಕರ್ತರು ಇಂತಹ ಪೊಳ್ಳು ನೋಟಿಸ್ ಗೆ ಹೆದರುವವರಲ್ಲ, ನೋಟಿಸನ್ನು ಹಿಂಪಡೆಯದೇ ಇದ್ದರೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : ಶ್ರೀನಿವಾಸ ನಾಯ್ಕಗೆ ಭುವನೇಶ್ವರಿ ಕನ್ನಡ ಸಂಘ ಬೆಂಬಲ

ಅನಂತಮೂರ್ತಿ ಹೆಗಡೆ ಖಂಡನೆ :

ಅನಂತಮೂರ್ತಿ ಹೆಗಡೆ

ಜಿಲ್ಲಾಡಳಿತ ಗಡಿಪಾರು ಕೇಸು ದಾಖಲು ಮಾಡಿದ ಭಟ್ಕಳದ ಸಂಘ ಪರಿವಾರದ ಕಾರ್ಯಕರ್ತ ಹನುಮಾನ ನಗರದ ಶ್ರೀನಿವಾಸ ನಾಯ್ಕ ಜೊತೆ ಬಿಜೆಪಿ ಮುಖಂಡ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಕರೆ ಮಾಡಿ ಮಾತನಾಡಿದರು. ಶ್ರೀನಿವಾಸ ನಾಯ್ಕರಿಗೆ ಧೈರ್ಯ ತುಂಬಿದ ಅವರು, ನಿಮ್ಮ ಜೊತೆಗೆ ನಾವಿದ್ದು, ಯಾವುದೇ ರೀತಿಯ ಸಹಾಯ ಮಾಡಲು ಬದ್ದರಿರುವುದಾಗಿ ಹೇಳಿದರು.
ಶ್ರೀನಿವಾಸ್ ನಾಯ್ಕ್ ಯಾವುದೇ ಅಪರಾಧ ಮಾಡಿಲ್ಲ, ಹಿಂದುತ್ವ ಪರವಾಗಿ ಹೋರಾಟದ ಪ್ರಕರಣ ಬಿಟ್ಟರೆ ಅವರ ಮೇಲೆ ಯಾವುದೇ ಕೇಸ್ ಇಲ್ಲ. ಹಿಂದುತ್ವದ ಪರವಾಗಿ ಹೋರಾಟ ಮಾಡುವುದನ್ನೇ ಅಪರಾಧ ಎಂದರೆ ಎನು ಹೇಳಬೇಕು? ಭಾರತ ಮಾತಾಕಿ ಜೈ ಎನ್ನುವವರಿಗೆ ಗಡಿಪಾರು ಶಿಕ್ಷೆ, ಪಾಕಿಸ್ತಾನ್ ಜಿಂದಾಬಾದ್ ಎನ್ನುವವರಿಗೆ ಬಿರಿಯಾನಿ ಭೋಜನ- ಇದು ಸಿದ್ದರಾಮಯ್ಯನ ಸರ್ಕಾರದ ಪದ್ಧತಿ ಎಂದು ಕಿಡಿಕಾರಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿರುವ ಸರ್ಕಾರದ ಈ ನಡೆ ಖಂಡನೀಯ. ಸಮಸ್ತ ಹಿಂದೂ ಸಮಾಜ ಶ್ರೀನಿವಾಸ ನಾಯ್ಕ ಅವರ ಬೆಂಬಲಕ್ಕಿದೆ. ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ದುಷ್ಟ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.