ಭಟ್ಕಳ : ಭಟ್ಕಳ ಜಾತ್ರೆ ಎಂದೇ ಕರೆಯಲ್ಪಡುವ ಶ್ರೀ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಪ್ರತಿ ವರ್ಷದಂತೆ ರಾಮನವಮಿ ದಿನದಂದು ಏ.೧೭ರಂದು ನಡೆಯಲಿದೆ. ವೇ। ಬ್ರ|| ತಾಂತ್ರಿಕ ರಮಾನಂದ ಅವಭ್ರತರ ನೇತೃತ್ವದಲ್ಲಿ ಏ.೧೦ರಿಂದ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.

ಇದನ್ನೂ ಓದಿ : ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ಯಶಸ್ವಿ

ಏ.೧೦ರಂದು ಧ್ವಜಾರೋಹಣ, ಶಿಭಿಕಾ ಯಂತ್ರೋತ್ಸವ ನಡೆಯಲಿದೆ. ಅಂದು ಸಂಜೆ ಶ್ರೀ ದೇವರ ಉತ್ಸವ ಮೂರ್ತಿಯು ಶ್ರೀ ಚೋಳೇಶ್ವರ ದೇವಸ್ಥಾನಕ್ಕೆ ತೆರಳುವುದು. ಏ.೧೧ರಂದು ಶಿಖಿ ವಾಹನೋತ್ಸವ ನಡೆಯಲಿದೆ. ಸಂಜೆ ಶ್ರೀ ದೇವರ ಉತ್ಸವವು ಮೂಡಭಟ್ಕಳದ ಶ್ರೀ ಕೇತಪೈ ನಾರಾಯಣ ದೇವಸ್ಥಾನಕ್ಕೆ ತೆರಳುವುದು. ಏ.೧೨ರಂದು ಡೊಲಾ ಯಂತ್ರೋತ್ಸವ ನಡೆಯಲಿದೆ. ಸಂಜೆ ಶ್ರೀ ದೇವರ ಉತ್ಸವವು ಶ್ರೀ ಪಶುಪತಿ ದೇವಸ್ಥಾನಕ್ಕೆ ತೆರಳುವುದು. ಏ.೧೩ರಂದು ಪುಷ್ಪ ಮಂಟಪೋತ್ಸವ ಜರುಗುವುದು. ಸಂಜೆ ಶ್ರೀ ದೇವರ ಉತ್ಸವವು ಶ್ರೀ ಕಾಶಿ ಮಠದ ಹಿಂದಿನ ಕಟ್ಟೆಗೆ ತೆರಳುವುದು. ಏ.೧೪ರಂದು ಅತೀವೇಗ ವಾಹನೋತ್ಸವ ಜರುಗುವುದು. ಸಂಜೆ ಶ್ರೀ ದೇವರ ಉತ್ಸವವು ಮೂಡಭಟ್ಕಳದ ಶ್ರೀ ಸಾಂತಪ್ಪ ನಾಯಕ ತಿರುಮಲ ದೇವಸ್ಥಾನಕ್ಕೆ ತೆರಳುವುದು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಏ.೧೫ರಂದು ಗಜ ವಾಹನೋತ್ಸವ ಜರುಗುವುದು. ಸಂಜೆ ಮಣ್ಕುಳಿಯ ಶ್ರೀ ರಘುನಾಥ ದೇವಸ್ಥಾನ ಶ್ರೀ ದೇವರ ಉತ್ಸವವು ತೆರಳುವುದು. ಏ. ೧೬ರಂದು ಸಿಂಹ ವಾಹನೋತ್ಸವ ನಡೆಯಲಿದೆ. ಸಂಜೆ ಶ್ರೀ ದೇವರ ಉತ್ಸವವು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ತೆರಳುವುದು. ಏ.೧೫ ಮತ್ತು ೧೬ರಂದು ರಾತ್ರಿ ಪುಷ್ಪ ರಥೋತ್ಸವ ಜರುಗುವುದು.

ಏ.೧೭ರಂದು ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಜರುಗುವುದು. ಏ.೧೮ರಂದು ಅಶ್ವ ವಾಹನೋತ್ಸವ, ಚೂರ್ಣೋತ್ಸವ, ಅವಭ್ರತ ಜರುಗುವುದು. ರಾತ್ರಿ ೯ ಗಂಟೆಗೆ ಭಟ್ಕಳದ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಜರುಗಲಿದೆ. ಈ ದಿನಗಳಲ್ಲಿ ದೇವಸ್ಥಾನದಲ್ಲಿ ತುಲಾಭಾರ, ವಸಂತ ಪೂಜೆ, ರಂಗ ಪೂಜೆ ಮತ್ತಿತರ ಸೇವೆ ಮಾಡಿಸಬಹುದಾಗಿದೆ. ಆಸಕ್ತ ಭಕ್ತಾದಿಗಳು ಎರಡು ದಿನ ಮುಂಚಿತವಾಗಿ ಕಾರ್ಯಾಲಯಕ್ಕೆ ತಿಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ಏ.೨೩ರಂದು ಹನುಮಜಯಂತಿ
ಏ.೨೩ರಂದು ಹನುಮ ಜಯಂತಿ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ ೮ ಗಂಟೆಗೆ ದೀಪ ಸ್ಥಾಪನೆಯೊಂದಿಗೆ ಸಪ್ತಪ್ರಹರ ಅಖಂಡ ಭಜನೆ ಪ್ರಾರಂಭವಾಗಲಿದೆ. ಅಪರಾಹ್ನ ೧೧ ಗಂಟೆಗೆ ಶ್ರೀ ಹನುಮಂತ ದೇವರಲ್ಲಿ ವಿಶೇಷ ಫಲಪಂಚಾಮೃತ ಅಭೀಷೇಕ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ ೧ ರಿಂದ ೩ ಗಂಟೆಯವರೆಗೆ ಮಹಾ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ೭ ಗಂಟೆಗೆ ಹೂವಿನ ಪೇಟೆಯಲ್ಲಿ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ ೮ ಗಂಟೆಗೆ ಉಭಯದೇವರಲ್ಲಿ ಹೂವಿನ ಪೂಜೆ ಮತ್ತು ಪ್ರಸಾದ ವಿತರಣೆ ಜರುಗುವುದು. ಮರುದಿನ ಏ.೨೪ರಂದು ಬೆಳಿಗ್ಗೆ ೫ ಗಂಟೆಗೆ ದೀಪ ವಿಸರ್ಜನೆಯೊಂದಿಗೆ ಸಪ್ತಪ್ರಹರ ಅಖಂಡ ಭಜನೆ ಸಮಾಪ್ತಿಗೊಳ್ಳಲಿದೆ.