ಕುಂದಾಪುರ : ಗಂಗೊಳ್ಳಿಯ ಫ್ಯಾನ್ಸಿ ಸ್ಟೋರ್‌ನಲ್ಲಿ ಕಳ್ಳತನ ಮಾಡಿದ್ದ ಭಟ್ಕಳದ ಓರ್ವ ಸಹಿತ ಐವರನ್ನು ಅಪರಾಧ ಕೃತ್ಯ ನಡೆದ ೪೮ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿಗೆ ದೇಶದಲ್ಲಿ ಒಳ್ಳೆಯ ವಾತಾವರಣ : ಮಾಜಿ ಸಚಿವ ಶಿವಾನಂದ ನಾಯ್ಕ

ಬಂಧಿತರಲ್ಲಿ ಗಂಗೊಳ್ಳಿಯ ಲೈಟ್‌ಹೌಸ್‌ನ ಸುಲೈಮಾನ್ ಅಲಿಯಾಸ್ ನದೀಮ್ (27), ಗಂಗೊಳ್ಳಿ ಮೀನು ಮಾರುಕಟ್ಟೆಯ ಮೊಹಮ್ಮದ್ ಆರಿಫ್ (18) ಮತ್ತು ಭಟ್ಕಳದ ಮೊಹಮ್ಮದ್ ರಯ್ಯಾನ್ (18) ಸೇರಿದ್ದಾರೆ.  ಅಲ್ಲದೆ, ಇಬ್ಬರು ಅಪ್ರಾಪ್ತರನ್ನು ಸಹ ಬಂಧಿಸಲಾಗಿದೆ. ಶಂಕಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಪ್ರಾಪ್ತರನ್ನು ಬಾಲಾಪರಾಧ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಗಂಗೊಳ್ಳಿ ಜಾಮಿಯಾ ಮಸೀದಿ ಕಾಂಪ್ಲೆಕ್ಸ್‌ನಲ್ಲಿರುವ ಫ್ಯಾನ್ಸಿ ಸ್ಟೋರ್‌ನಲ್ಲಿ ಮಾರ್ಚ್ ೩೧ ರಂದು ಸಂಜೆ ಕಳ್ಳತನ ನಡೆದಿದೆ. ಸಿಬ್ಬಂದಿ ಸಂಜೆ ನಮಾಜ್ ಗೆ ತೆರಳಿದಾಗ ಕಳ್ಳತನ ನಡೆದಿತ್ತು. ಕ್ಯಾಶ್ ಕೌಂಟರ್ ನಲ್ಲಿದ್ದ ೯೦ ಸಾವಿರ ರೂ. ನಗದು ಹಾಗೂ ೧೫ ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಕಳವು ಮಾಡಲಾಗಿತ್ತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್‌ಐಗಳಾದ ಹರೀಶ್ ಆರ್, ಬಸವರಾಜ ಕನಶೆಟ್ಟಿ, ಪಿಸಿಗಳಾದ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ ಕುರಣಿ, ಸತೀಶ ಅವರ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಶಂಕಿತರನ್ನು ಬಂಧಿಸುವಲ್ಲಿ ಕ್ಷಿಪ್ರ ಕ್ರಮ ಕೈಗೊಂಡಿದ್ದ ತಂಡವನ್ನು ಎಸ್ಪಿ ಡಾ.ಅರುಣ್ ಕೆ ಶ್ಲಾಘಿಸಿದ್ದಾರೆ.