ಭಟ್ಕಳ: ಪಟ್ಟಣದ ಶ್ರೀ ಶಾಂತಪ್ಪ ನಾಯಕ ತಿರುಮಲ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವವು ಭಕ್ತರ ಹರ್ಷೊದ್ಘಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು.

ಇದನ್ನೂ ಓದಿ : ಬಾರಕೊಲ್ ಬೋಳೆ – ಅಚ್ಚರಿಗಳ ಮೂಟೆ

ಶ್ರೀನಿವಾಸ ಕಲ್ಯಾಣೋತ್ಸವ ಅಂಗವಾಗಿ ಶ್ರೀ ತಿರುಮಲ ದೇವಸ್ಥಾನದಲ್ಲಿ ಇಡೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ವಧುವರರಂತೆ ಸಿಂಗಾರಗೊಂಡ ಶ್ರೀನಿವಾಸ ಸ್ವಾಮಿ ಹಾಗೂ ಪದ್ಮಾವತಿ ದೇವಿಯನ್ನು ಬರಮಾಡಿಕೊಳ್ಳಲಾಯಿತು. ವಧುವಿನ ಕಡೆಯಿಂದ ಜಯಂತಿ ಮತ್ತು ನರಸಿಂಹ ಪ್ರಭು ಸಿದ್ಧಗೊಂಡರೆ, ವರನ ಕಡೆಯಿಂದ ಕಮಲಾಕ್ಷಿ ಮತ್ತು ದೇವಿದಾಸ ಪ್ರೇಮಾನಂದ ಲಾಡ ಮದುವೆಯ ಎಲ್ಲಾ ಸಂಪ್ರದಾಯ ಪೊರೈಸಿದರು. ಅರ್ಚಕ ವೇ.ಮೂ. ಸರ್ವೋತ್ತಮ ಭಟ್ ಸಾರಥ್ಯದಲ್ಲಿ ವೇ.ಮೂ. ರಾಜಾರಾಮ ಭಟ್, ಪ್ರಮೋದ ಭಟ್ ಮತ್ತಿತರರು ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ವಿಜೃಂಭಣೆಯಿಂದ ನಡೆದ ಕಲ್ಯಾಣೋತ್ಸವದಲ್ಲಿ ಸಮಸ್ತ ಮನುಕುಲಕ್ಕೆ ಒಳಿತು ಮಾಡುವಂತೆ ಶ್ರೀ ದೇವರಲ್ಲಿ ಪ್ರಾರ್ಥಿಸಲಾಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ರೇಡಿಯೋ ಕಲಾವಿದ ಉದಯ ಪ್ರಭು ಅವರ ಭಜನೆ ಕಾರ್ಯಕ್ರಮ ಭಕ್ತರನ್ನು ಮುದಗೊಳಿಸಿತು. ಭಟ್ಕಳ ಮಹಿಳಾ ಮಂಡಲದವರು ಉದಯ ಪ್ರಭು ಅವರಿಗೆ ಸಾಥ್ ನೀಡಿದರು.

ಜಿಎಸ್‌ಬಿ ಸಮಾಜದ ಮುಖಂಡರು, ಸ್ಥಳೀಯರು ಸೇರಿದಂತೆ ನೂರಾರು ಸಂಖ್ಯೆಯ ಭಕ್ತರು ಈ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದರು. ಶ್ರೀ ತಿರುಮಲ ದೇವರ ಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ಸೇವೆ ನಡೆಯಿತು.