ಹೊನ್ನಾವರ/ಶಿವಮೊಗ್ಗ : ಕರ್ಕಿ ದೈವಜ್ಣ ಬ್ರಾಹ್ಮಣ ಮಠದ‌ ಟ್ರಸ್ಟ್ ಕಾರ್ಯದರ್ಶಿ ರಘುನಾಥ ಪಿ. ರಾಯ್ಕರ್(೭೧) ಇಂದು (ಏ.೧೧) ಮಧ್ಹಾಹ್ನ ೨ ಗಂಟೆ ಸುಮಾರಿಗೆ ನಿಧನರಾದರು. ಚಿಕಿತ್ಸೆಗೆ ಸ್ಪಂದಿಸದೆ ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇದನ್ನೂ ಓದಿ : ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ್ದಂತಿದೆ : ಹರಿಪ್ರಕಾಶ ಕೋಣೆಮನೆ

ಶಿವಮೊಗ್ಗದ ಹಿರಿಯ ಲೆಕ್ಕಪರಿಶೋಧಕರಾಗಿದ್ದ ರಘುನಾಥ ಪಿ. ರಾಯ್ಕರ್ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ರಾಯ್ಕರ್ & ಕಂಪನಿ ನಡೆಸುತ್ತಿದ್ದರು. ದೈವಜ್ಞ ಬ್ರಾಹ್ಮಣ ಸಮಾಜದ ಮುಖಂಡರೂ, ರೋಟರಿ ಸದಸ್ಯರೂ ಆಗಿದ್ದರು. ಇವರ ಪತ್ನಿ ವಿನಯಾ ರಾಯ್ಕರ್ ಅಖಿಲ ಕರ್ನಾಟಕ ದೈವಜ್ಞ ಮಹಿಳಾ ಸಮಾಜದ ಅಧ್ಯಕ್ಷೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.