ಶಿರಸಿ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಮವಾರ ತಮ್ಮ ಸ್ವಕ್ಷೇತ್ರದಲ್ಲಿ ಪ್ರಚಾರ ಸಭೆಗಳನ್ನು ನಡೆಸಿದರು.
ಇದನ್ನೂ ಓದಿ : ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗಾಗಿ ನಾಳೆ ಚಂಡಿಕಾ ಹವನ
ಶಿರಸಿ ತಾಲೂಕಿನ ಹುಲೇಕಲ್, ತಾರಗೋಡ, ಇಸಳೂರು, ಸಿದ್ದಾಪುರ ಭಾಗದ ಕಾನಸೂರು, ಹಾರ್ಸಿಕಟ್ಟಾ, ಕೋಲಶಿರ್ಸಿ, ಅಣಲೇಬೈಲ್ ಮುಂತಾದ ಕಡೆಗಳಲ್ಲಿ ಕಾರ್ಯಕರ್ತರು, ಹಿತೈಷಿಗಳೊಂದಿಗೆ ಸಭೆ ನಡೆಸಿದರು. ೩ ಅವಧಿಗೆ ಶಾಸಕರಾಗಿ ಇದೇ ಶಿರಸಿ – ಸಿದ್ದಾಪುರ ಕ್ಷೇತ್ರದಿಂದ ಶಾಸಕರಾಗಿ ಕಾಗೇರಿ ಆಯ್ಕೆಯಾಗಿದ್ದರು. ಅವರನ್ನು ಈ ಬಾರಿ ಸಂಸತ್ ಗೆ ಕಳಿಸುವುದಾಗಿ ಕಾರ್ಯಕರ್ತರು ಶಪಥ ಮಾಡಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ವೇಳೆ ಮಾತನಾಡಿದ ಕಾಗೇರಿ,
ಮತದಾರರ ಭಾವನೆಯನ್ನು ಅರಿಯುವುದು ಕಷ್ಟ. ನಾವು ಗಾಳಿಯಲ್ಲಿ ಇರುತ್ತೇವೆ. ಆಗ ನಿರೀಕ್ಷಿತ ಗೆಲುವು ಆಗುವುದಿಲ್ಲ. ಈ ಹಿಂದೆ ವಾಜಪೇಯಿ ಸಂದರ್ಭದಲ್ಲಿ ಇದೇ ರೀತಿ ಗಾಳಿ ಬೀಸಿತ್ತು. ಆಗ ಮೈಮರೆತ ಕಾರಣ ಸೋಲಾಗಿತ್ತು. ಈಗಲೂ ಎಲ್ಲೆಡೆ ಮೋದಿ ಹವಾ ನಡೆಯುತ್ತಿದೆ. ಆದರೆ ಈಗ ಕಾಂಗ್ರೆಸ್ ಹಣ ನೀಡಲು ಬರುತ್ತಾರೆ. ೫೦೦, ಸಾವಿರ ರೂ. ತರುತ್ತಾರೆ. ಅವರಿಗೆ ಬೇರೆ ದಾರಿಯಿಲ್ಲ. ನೈತಿಕವಾಗಿ ಅವರು ದಿವಾಳಿಯಾಗಿದ್ದಾರೆ. ಕಾರಣ ನಾವು ಎಚ್ಚರಿಕೆಯಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಜೆಡಿಎಸ್ ಮತ್ತು ಬಿಜೆಪಿ ವಿಶ್ವಾಸದಲ್ಲಿದ್ದೇವೆ. ಕಾಂಗ್ರೆಸ್ ಆ ರೀತಿ ಇಲ್ಲ. ಗ್ಯಾರಂಟಿ ಮತ್ತು ಹಣ ಎರಡು ಅಸ್ತ್ರ ಅವರ ಬಳಿಯಿದೆ. ಆದರೆ ಗ್ಯಾರಂಟಿ ಎಷ್ಟು ಜನಕ್ಕೆ ಬಂದಿದೆ ? ಇದರ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು. ಇದು ದೇಶದ ಭವಿಷ್ಯದ ಚುನಾವಣೆ. ಜನರಿಗೆ ಉಜ್ವಲ ಗ್ಯಾಸ್, ಕಿಸಾನ್ ಸಮ್ಮಾನ್ ಯೋಜನೆ, ಜನೌಷಧ, ಆಯುಷ್ಮಾನ್ ಹೀಗೆ ಕೇಂದ್ರದ ಹಲವು ಯೋಜನೆಗಳು ಜನಪರವಾಗಿದೆ. ಇದನ್ನು ಅರಿವು ಮೂಡಿಸಬೇಕು ಎಂದರು.
ಮೋದಿಯವರು ಪ್ರಧಾನಿಯಾದ ನಂತರ ದೇಶದ ಭದ್ರತೆ ಹೆಚ್ಚಿದೆ. ಭಯೋತ್ಪಾದನೆ ಕಡಿಮೆಯಾಗಿದೆ. ಅವರು ನಮಗೆ ಅನಿವಾರ್ಯ. ಬಡವರಿಗೆ ಸಾಕಷ್ಟು ಯೋಜನೆಗಳೂ ಬಂದಿವೆ. ಅಭಿವೃದ್ಧಿಯ ಪಥದಲ್ಲಿ ಮುಂದೆ ಹೋಗುತ್ತಿದ್ದೇವೆ. ಸೈನಿಕರ ಮಾನಸಿಕ ಸ್ಥೈರ್ಯ ಹೆಚ್ಚಿಸಲಾಗಿದೆ. ಆರ್ಥಿಕವಾಗಿ ಜಗತ್ತಿನ ೫ ನೇ ಶಕ್ತಿ ಭಾರತವಾಗಿದೆ. ಚಂದ್ರಯಾನ ಯಶಸ್ಸು ಕಂಡಿದೆ ಎಂದರು.
ದೇಶಕ್ಕೆ ಇಂದು ಮೋದಿ ಅನಿವಾರ್ಯವಾಗಿದೆ. ಹಿಂದಿನ ಯಾವ ಬೇಸರವನ್ನೂ ಇಟ್ಟುಕೊಳ್ಳಬಾರದು. ಬೇಸರದ ಮನಸ್ಸಿನಲ್ಲಿ ಮೋದಿಗೆ ತೊಂದರೆ ಕೊಡಬಾರದು. ಆರ್ಟಿಕಲ್ 370 ರದ್ದು ಮಾಡಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಆದರೆ ಕಾಂಗ್ರೆಸ್ ಮುಸ್ಲಿಂ ಲೀಗ್ ಪ್ರಣಾಳಿಕೆ ನೀಡಿದೆ. ಕಾರಣ ನಮಗೆ ಮೋದಿ ಅನಿವಾರ್ಯ ಆಗಿದೆ ಎಂದರು.
ಸ್ವಕ್ಷೇತ್ರದಲ್ಲಿ ಪ್ರಚಾರ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಇದ್ದರು.