ಭಟ್ಕಳ: ಗ್ರಾಮದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ನಾಳೆ (ಏ.೧೭) ಜರುಗಲಿದೆ. ಭಟ್ಕಳ ಜಾತ್ರೆಗೆ ಸಕಲ ಸಿದ್ಧತೆ ಆರಂಭಗೊಂಡಿದ್ದು, ಅಂತಿಮ ಹಂತದಲ್ಲಿದೆ.

ರೀಲ್ಸ್ ನೋಡಿ : ಭಟ್ಕಳ ಜಾತ್ರೆಗೆ ಕ್ಷಣಗಣನೆ

ಜಿಲ್ಲೆಯ ಅತಿ ದೊಡ್ಡ ಜಾತ್ರಾ ರಥೋತ್ಸವ ಕಾರ್ಯಕ್ರಮದ ಪೂರ್ವಭಾವಿ ತಯಾರಿ ಭರದಿಂದ ನಡೆಯುತ್ತಿದೆ. ಏಪ್ರಿಲ್ 9 ರ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ತಾಂತ್ರಿಕರಾದ ವೇ.ಮೂ.ರಮಾನಂದ ಆವಭೃತರ ಆಚಾರ್ಯತ್ವದಲ್ಲಿ ಬೆಳಿಗ್ಗೆ ಧ್ವಜಸ್ಥಂಭಕ್ಕೆ ಗರುಡನ ಪಟವನ್ನು ಕಟ್ಟುವ ಮೂಲಕ ರಥೋತ್ಸವದ ವಿಧಿವಿಧಾನಗಳು ವಿಧ್ಯುಕ್ತವಾಗಿ ಚಾಲನೆಗೊಂಡವು.
ದೇವಳದ ಒಳಗೆ ಹನುಮ ದೇವರ ಸಕಲ ಪೂಜಾ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ. ಪ್ರತಿನಿತ್ಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದೇವಳದಲ್ಲಿ ನಡೆಯುತ್ತಿವೆ. ಊರ ಹಬ್ಬವಾದ ಈ ಜಾತ್ರೆಗೆ ತಾಲೂಕು ಅಷ್ಟೇ ಅಲ್ಲದೇ ಜಿಲ್ಲೆ, ರಾಜ್ಯದಿಂದಲೂ ಜನರ ಬರುವುದುಂಟು.

ಇದನ್ನೂ ಓದಿ : ತಿಂಗಳ ಬೆಳಕು – ಹಿರಿಯ ಸಾಹಿತಿ ವಿ.ಗ.ನಾಯಕರ ವಿಮರ್ಶೆ

ಈಗಾಗಲೇ ದೇವಸ್ಥಾನದ ಪ್ರಾಂಗಣ ಹಾಗೂ ಹೊರಾಂಗಣಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ದೇವಾಲಯ ಜಾತ್ರಾ ರಥೋತ್ಸವಕ್ಕೆ ಕಂಗೊಳಿಸುವಂತೆ ಸಜ್ಜುಗೊಳಿಸಲಾಗುತ್ತಿದೆ. ಸದ್ಯ ಸುಂದರ ರಥಕ್ಕೆ ಬಣ್ಣ ಬಳಿದಿದ್ದು, ರಥ ಕಟ್ಟುವ ಕಾರ್ಯ ಚಾಲ್ತಿಯಲ್ಲಿದೆ.

ರಥೋತ್ಸವದ ಅಂಗವಾಗಿ ದಿನವೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಜೆ ಪ್ರತಿ ದಿನವೂ ದೇವರ ಉತ್ಸವ ನಡೆಯುತ್ತಿದೆ. ನಿನ್ನೆ ರಾತ್ರಿ ಪುಷ್ಪ ರಥೋತ್ಸವ ನಡೆದಿದ್ದು, ಇಂದು ರಾತ್ರಿ ಕೂಡ ಜರುಗಲಿರುವುದು.


ಒಟ್ಟಿನಲ್ಲಿ ಈ ಬಾರಿ ಭಕ್ತರಲ್ಲಿ ಭಟ್ಕಳ ಜಾತ್ರೆ ವಿಶೇಷವಾಗಿದೆ., ರಥೋತ್ಸವಕ್ಕೆ ಒಂದೇ ದಿನ ಬಾಕಿಯಿದ್ದು ಕ್ಷಣಗಣನೆ ನಡೆಯುತ್ತಿದೆ. ಭಟ್ಕಳ ಸಂಪೂರ್ಣ ಊರಿನ ಜಾತ್ರೆಗೆ ಸಜ್ಜುಗೊಳುತ್ತಿದೆ. ಭಟ್ಕಳಿಗರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.