ಭಟ್ಕಳ: ಪಟ್ಟಣದ ಅಷ್ಟ ದಿಕ್ಕುಗಳ ಆಂಜನೇಯ ದೇವಸ್ಥಾನಗಳಲ್ಲಿ ಒಂದಾದ ಕಾಸ್ಮುಡಿ ಹನುಮಂತ ದೇವಸ್ಥಾನದ ಪ್ರತಿಷ್ಠಾಂಗ ದೃಢ ಸಂಪ್ರೋಕ್ಷಣ್ಯ ಹಾಗೂ ಮಂಡಲ ಪೂಜೆ ಸಂಪನ್ನವಾಯಿತು.

ಇದನ್ನೂ ಓದಿ : ಪ್ರತಿಷ್ಠಾ ವರ್ಧಂತ್ಯೋತ್ಸವ ಏ.೩೦ರಂದು

ವೇದಮೂರ್ತಿ ರಮಾನಂದ ಅವಭ್ರತ ಅವರ ನೇತೃತ್ವದಲ್ಲಿ ವೈದಿಕರಾದ ಪ್ರಕಾಶ ಅಡಿಗ, ಸತೀಶ ಭಟ್ಟ ಹಾಗೂ ಇತರರಿಂದ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬಳಿಕ ಕಲಶಾಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ ಮಾಡಲಾಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ರಮಾನಂದ ಭಟ್ಟ ಅವರು, ಈ ಜಗತ್ತೇ ದೈವಾಧೀನವಾಗಿದೆ. ದೇವರಅ ನುಗ್ರಹ ಪಡೆಯಲು ನಾವು ಮಂತ್ರ ಪುರಸ್ಕರವಾದ ಬಿಂಬವನ್ನು ಪೂಜಿಸಿದಾಗ ನಮಗೆ ಎಲ್ಲ ರೀತಿಯ ಅನುಗ್ರಹಗಳು ಹರಿದು ಬರುತ್ತವೆ. ದೇವರು ಪ್ರತಿಯೊಂದು ವಸ್ತುವಿನಲ್ಲಿ ಇದ್ದರೂ ದೇವರ ವಿಗ್ರಹದಲ್ಲಿ ವಿಶೇಷವಾದ ಮಂತ್ರಗಳಿಂದ ಆಹ್ವಾಹನೆ ಮಾಡಿದಾಗ ತನ್ಮೂಲಕ ನಮಗೆ ಅನುಗ್ರಹ ಮಾಡುತ್ತಾನೆ ಎನ್ನುವುದನ್ನು ಶಾಸ್ತ್ರ ಹೇಳುತ್ತದೆ. ನಾವು ಹುಟ್ಟಿಗೆ ಬಂದ ನಂತರ ಮೂರು ಋಣಗಳಿಂದ ನಿವೃತ್ತಿಯನ್ನು ಪಡೆಯಬೇಕಾಗಿದೆ. ಅವುಗಳಿಂದ ಮುಕ್ತಿಯನ್ನು ಪಡೆಯಬೇಕಾದರೆ ನಾವು ಎಲ್ಲ ಮೂರು ಋಣಗಳನ್ನು ತೀರಿಸಬೇಕಾಗುತ್ತದೆ. ಇಲ್ಲಿ ಆಂಜನೇಯನ ಅನುಷ್ಠಾನವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮಾಡಿದ್ದೀರಿ. ಇದರಿಂದ ನಿಮ್ಮ ಜಾಡ್ಯತ್ಯವು ನಿವಾರಣೆಯಾಗಿ, ಬುದ್ದಿ ವೃದ್ಧಿಯಾಗುತ್ತದೆ. ಅಲ್ಲದೇ ಹನುಮಂತನ ಆರಾಧನೆಯಿಂದ ರೋಗಗಳು ದೂರವಾಗುತ್ತವೆ. ಭಗವಂತನನ್ನು ಭಕ್ತಿಯಿಂದ ಬೇಡಿಕೊಂಡಾಗ ಅನುಗ್ರಹವಾಗುತ್ತದೆ. ಇಲ್ಲಿ ಭಕ್ತಿಯೇ ಪ್ರಧಾನವಾಗಿದೆ ಎಂದರು.

ಕಾಸ್ಮುಡಿ ಹನುಮಂತ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಣ್ಣಪ್ಪ ಅಬ್ಬಿಹಿತ್ತಲ, ಗೌರವಾಧ್ಯಕ್ಷ ಈರಪ್ಪ ಗರ್ಡಿಕರ್, ಪ್ರಕಾಶ ನಾಯ್ಕ, ಮೃತ್ಯುಂಜಯ ಆಚಾರ್ಯ, ಗಜಾನನ ಆಚಾರ್ಯ ಸೇರಿದಂತೆ ಊರಿನ ಪ್ರಮುಖರು, ದೇವಸ್ಥಾನದ ದಾನಿಗಳು, ಭಕ್ತರು ಉಪಸ್ಥಿತರಿದ್ದರು.