ಭಟ್ಕಳ : ಹಿಂದೂ ಧರ್ಮದ ಹೆಣ್ಣು ಮಕ್ಕಳು ಕಾಲೇಜುಗಳಿಗೆ ಹೋಗಿ ಓದುವುದು ಕಷ್ಟದ ಸಂಗತಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ ಆಸರಕೇರಿ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಭಟ್ಕಳ ವಿಶ್ವ ಹಿಂದೂ ಪರಿಷತ್  ಮತ್ತು  ಹಿಂದೂ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಇದನ್ನೂ ಓದಿ : ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದ್ದೇನು?

ಜಿಹಾದಿ  ಮನಃಸ್ಥಿತಿಯವರು ನಮ್ಮ ಯುವತಿಯರನ್ನು ಪ್ರೀತಿಯಲ್ಲಿ ಬೀಳಿಸುತ್ತಿದ್ದಾರೆ. ಅವರನ್ನು ಟಾರ್ಗೆಟ್ ಮಾಡಿ ಮತಾಂತರ ಮಾಡುತ್ತಿದ್ದಾರೆ. ಅದಕ್ಕೆ ಒಪ್ಪದಿದ್ದರೆ ಕೊಲೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಬೆಂಬಲವಾಗಿ ನಿಂತಿದೆ. ಇಂಥ ನೀಚ ಕೃತ್ಯ ನಡೆಸುವವರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲ ಆರು ತಿಂಗಳಿಗೊಮ್ಮೆ ಇಂಥ ಕೊಲೆ ಪ್ರಕರಣಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಾ ಬಂದಿದೆ. ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿಯಿಂದ ಹಿಂದುಗಳ ಮೇಲೆ ಹಲ್ಲೆ ಹಾಗೂ ಕೊಲೆಯಂತ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಾ ಬಂದಿವೆ. ಹಿಂದುಗಳು ಹಿಂಸೆ ಅನುಭವಿಸುತ್ತಾ ಬಂದಿದ್ದಾರೆ. ಮತಾಂಧ ಶಕ್ತಿಗಳ ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ಮೃದು ಧೋರಣೆಯನ್ನು ತೋರುತ್ತಿದೆ. ಇಲ್ಲಿ ನಾವು ಎಷ್ಟು ಸನ್ನಿವೇಶಗಳನ್ನು ನೋಡಿ ಕಣ್ಣಿದ್ದು ಕುರುಡರಂತೆ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಪ್ರತಿಯೊಬ್ಬ ಹಿಂದು ಇದರ ಬಗ್ಗೆ ಎಚ್ಚೆತ್ತುಗೊಳ್ಳಬೇಕಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಘಟನೆ ಭಟ್ಕಳದಲ್ಲೂ ಮರುಕಳಿಸುವ ಸಾಧ್ಯತೆ ಇದೆ. ನಮ್ಮ ಮನೆಯ ಯುವತಿಯರಿಗೆ ನಾವು ಬುದ್ದಿ ಹೇಳಬೇಕು. ಅನ್ಯ ಧರ್ಮೀಯರ ಅಂಗಡಿಗಳಿಗೆ ಕೆಲಸಕ್ಕೆ ಹಿಂದೂ ಧರ್ಮದ ಯುವತಿಯರನ್ನು ಕಳಿಸುತ್ತಿದ್ದೀರಿ. ಎಷ್ಟೋ ಯುವತಿಯರು ಕಣ್ಮರೆಯಾಗುತ್ತಿದ್ದಾರೆ. ನಿಮ್ಮ ಮನೆಯ ಬಾಲಕಿಯರ ರಕ್ಷಣೆ ನಿಮ್ಮ ಕೈಯಲ್ಲಿದೆ. ಬಡತನ, ನಿರುದ್ಯೋಗ ಇರಬಹುದು. ಅನ್ಯ ಧರ್ಮೀಯರ ಅಂಗಡಿಗಳಲ್ಲಿ ಕೆಲಸ ಅದು ನಮಗೆ ಅನಿವಾರ್ಯವಾಗಬಾರದು ಎಂದರು.

ಭಟ್ಕಳದಲ್ಲಿ ಎಷ್ಟೋ ಅನಧಿಕೃತ ಚಟುವಟಿಕೆಗಳು ನಡೆಯುತ್ತಿವೆ. ಅಸಂಖ್ಯಾತ ಕೆಲಸಗಳಿವೆ. ಆದರೆ ನೀವು ಅದೆಲ್ಲವನ್ನು ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ತಾತ್ಸಾರದಿಂದ ನೋಡುತ್ತೀರಿ. ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದ್ದೀರಿ. ಇಂಥ ಪ್ರವೃತ್ತಿಯನ್ನು ಬಿಡಬೇಕಾಗಿದೆ. ಬೇರೆ ರಾಜ್ಯದಲ್ಲಿ ಅಪರಾಧ ಕೃತ್ಯ ನಡೆಸಿ ಭಟ್ಕಳದಲ್ಲಿ ಬಂದು ನೆಲೆಸಿದ್ದವರ ಬಗ್ಗೆ ಭಟ್ಕಳ ಪೊಲೀಸರು ಗಮನ ಹರಿಸಬೇಕು. ಅವರನ್ನು ಗಡಿಪಾರು ಮಾಡುವ ಬದಲು ರಾಷ್ಟ್ರದ ಹಿತಕ್ಕಾಗಿ ಹಾಗೂ ಹಿಂದೂಗಳಿಗೆ ಅನ್ಯಾಯವಾದ ವೇಳೆ ಹೋರಾಟ ಮಾಡುವರನ್ನು ಗಡಿಪಾರು ಮಾಡುವುದಲ್ಲ. ೧೯೯೩ ರಿಂದ ಹಿಂದೂ ಕಾರ್ಯಕರ್ತರಿಗೆ ಹಾಗೂ ಹೋರಾಟಗಾರರಿಗೆ ಇದು ಹೊಸತಲ್ಲ ಎಂದರು.

ಹಿಂದೂಗಳು ಇರುವುದರಿಂದ ಪೊಲೀಸರು ಭಟ್ಕಳದಲ್ಲಿ  ಸುಗಮವಾಗಿ ಕರ್ತವ್ಯ  ನಿರ್ವಹಿಸುತ್ತಿದ್ದೀರಾ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಹಿಂದೂಗಳಿಂದ ಯಾವುದೇ ಪೊಲೀಸರಿಗೆ ತೊಂದರೆಯಾಗಿಲ್ಲ. ಕಳೆದ ಬಾರಿ ಗೋ ರಕ್ಷಣೆ ಮಾಡುವ ವೇಳೆಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಗಾಡಿ ಹತ್ತಿದ್ದ ವೇಳೆ ನಿಮ್ಮ ಬೆಂಬಲಕ್ಕೆ ನಿಂತಿದ್ದು ನಮ್ಮ ಭಟ್ಕಳದ ಹಿಂದೂ ಸಮುದಾಯದವರು ಎಂದು ನೆನಪಿಡಿ ಎಂದು ನಿವೃತ್ತ ಯೋಧರೂ ಆಗಿರುವ ಶ್ರೀಕಾಂತ ನಾಯ್ಕ ಹೇಳಿದರು.