ಕುಮಟಾ: ವಿದ್ಯಾರ್ಥಿ ಜೀವನದಲ್ಲಿಯೇ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಸುಬ್ರಹ್ಮಣ್ಯ ಧಾರೇಶ್ವರ ಬದುಕಿನಲ್ಲಿ ಕಂಡ ಅನುಭವವೇ ಅವರ ಕಲಾಶಕ್ತಿಗೆ ಪ್ರೇರಣೆಯಾಗಿತ್ತು ಎಂದು ನಿವೃತ್ತ ಶಿಕ್ಷಕ ವಿ.ಕೆ.ಭಟ್ ಹೇಳಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಧಾರೇಶ್ವರದ ಶ್ರೀ ಧಾರಾನಾಥ ಸಭಾಭವನದಲ್ಲಿ ದಿ. ಸುಬ್ರಹ್ಮಣ್ಯ ಧಾರೇಶ್ವರರ ಅಭಿಮಾನ ಬಳಗ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ಬದುಕಿನಲ್ಲಿ ಇನ್ನಷ್ಟು ಸಾಧಿಸಿ ತೋರಿಸುವ ಅವಕಾಶವಿದ್ದರೂ ವಿಧಿ ಅವರನ್ನು ಬಿಡಲಿಲ್ಲ. ನನ್ನ ವಿದ್ಯಾರ್ಥಿಯಾಗಿ, ಅಪ್ರತಿಮ ಸಾಧಕನಾಗಿ ಯಕ್ಷಗಾನಕ್ಕೆ ಹೊಸ ಶೈಲಿ ರೂಪಿಸಿದ ನಿರ್ಮಾತ ಸುಬ್ರಹ್ಮಣ್ಯ ಧಾರೇಶ್ವರ ಆಗಿದ್ದರು ಎಂದರು.

ಇದನ್ನೂ ಓದಿ : ಹೆಸರಾಂತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಯಕ್ಷಗಾನದ ಪ್ರಯೋಗಶೀಲ ಭಾಗವತರಾಗಿ ನಾಡು ಕಂಡ ಶ್ರೇಷ್ಠ ಕಲಾವಿದರಲ್ಲಿ ಓರ್ವರಾದ ಸುಬ್ರಹ್ಮಣ್ಯ ಧಾರೇಶ್ವರ ಎಲ್ಲಾ ಭಾವಗಳ ಬೇರಿನಂತೆ ಪಾತ್ರಕ್ಕೆ ತಕ್ಕ ಭಾಗವತಿಕೆಯ ಮೂಲಕ ಕಲಾರಸಿಕರ ಮನ ಗೆದ್ದ ಅಪರೂಪದ ಸಾಧಕರಾಗಿದ್ದರು. ಬಡಗು ತಿಟ್ಟಿನ ಪ್ರಖ್ಯಾತ ಭಾಗವತರಾಗಿ ಯಕ್ಷ ಪರಂಪರೆಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿ ೨೫ ವರ್ಷಗಳ ಕಾಲ ಪ್ರಧಾನ ಭಾಗವತರಾಗಿ ಜನಮನ್ನಣೆ ಗಳಿಸಿದ್ದರು. ಅಪ್ರತಿಮ ಯಕ್ಷ ಕಲಾವಿದರಾಗಿದ್ದ ಸುಬ್ರಹ್ಮಣ್ಯ ಭಾಗವತರ ನಿಧನ ಯಕ್ಷಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಅವರ ಹೃದಯ ಸಿರಿವಂತಿಕೆ ಮತ್ತು ಕಲಾಸಿರಿವಂತಿಕೆ ನಾಡಿಗೆ ಮಾದರಿಯಾದದ್ದು ಎಂದರು.

ಇದನ್ನೂ ಓದಿ : ಶ್ರಾವ್ಯ ಭಟ್ಟ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ೫ನೇ ರ‍್ಯಾಂಕ್

ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಮು ಅಡಿ, ಪ್ರಭಾಕರ ಭಂಡಾರಿ, ಸುಬ್ರಹ್ಮಣ್ಯ ಭಟ್ಟ, ಆರ್.ಕೆ. ಭಟ್ಟ ಅವರು ಧಾರೇಶ್ವರರ ಜೊತೆಗಿನ ಒಡನಾಟದ ಕುರಿತು ಮಾತನಾಡಿದರು.

ಸಭೆಯಲ್ಲಿ ದೇವಗಿರಿ ಯುವ ಬಳಗದ ಅಧ್ಯಕ್ಷ ಸಚಿನ ನಾಯ್ಕ, ಧಾರನಾಥ ದೇವಸ್ಥಾನದ ಮೊಕ್ತೇಸರ ಲಕ್ಷ್ಮಣ ಪ್ರಭು, ಗ್ರಾಮ ಪಂಚಾಯತ ಸದಸ್ಯ ನಾಗೇಶ ನಾಯ್ಕ, ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕುಮಾರ ಭಟ್ಟ, ಸುಬ್ರಾಯ ಭಟ್ಟ, ನಾಗರಾಜ ಜೋಷಿ, ಕೇಶವ ಮಡಿವಾಳ, ಕೃಷ್ಣ ನಾಯ್ಕ, ಕಲಾವಿದ ಪಿ.ಎನ್.ಹೆಗಡೆ, ಅಭಿಮಾನಿ ಬಳಗದ ನಾಗರಾಜ ಶೇಟ್, ಶ್ರೀಕಾಂತ ಭಟ್ಟ, ಉದಯ ಭಟ್ಟ ಮುಂತಾದವರು ಉಪಸ್ಥಿತರಿದ್ದರು.