ಭಟ್ಕಳ: ತನ್ನ ಹೆಂಡತಿ ಹೆರಿಗೆಯಾದ ಸರ್ಕಾರಿ ಆಸ್ಪತ್ರೆಗೆ ೧೫ ಸೀಲಿಂಗ್ ಫ್ಯಾನ್ ಗಳನ್ನು ವ್ಯಕ್ತಿಯೊಬ್ಬ ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾನೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಹೌದು… ಕಳೆದ ಒಂದು ವಾರದ ಹಿಂದಷ್ಟೇ ಇಲ್ಲಿನ ಮಣ್ಕುಳಿಯ ಕಲ್ಮರ್ಗಿ ಮನೆ ನಿವಾಸಿ ಚಂದ್ರು ನಾರಾಯಣ ನಾಯ್ಕ ಅವರ ಪತ್ನಿ ಶೋಭಾ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ತನ್ನ ಹೆಂಡತಿಯ ಹೆರಿಗೆಯನ್ನು ಸುಗಮವಾಗಿ ಮತ್ತು ತಾಯಿ ಮಗುವನ್ನು ಉತ್ತಮವಾಗಿ ಆರೈಕೆ ಮಾಡಿರುವುದಕ್ಕಾಗಿ ಆಸ್ಪತ್ರೆಗೆ ಏನಾದರು ಉಡುಗೊರೆ ನೀಡಬೇಕೆಂದು ನಿರ್ಧರಿಸಿದ್ದರು. ಹೀಗಾಗಿ, ಹೆಂಡತಿ ಹೆರಿಗೆಯಾದ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ೧೫ ಸೀಲಿಂಗ್ ಫ್ಯಾನ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ : ಸಹಿ ಸಂಗ್ರಹಣೆ ಮೂಲಕ ಮತದಾನ ಜಾಗೃತಿ
ಇವರ ಈ ಕಾರ್ಯಕ್ಕೆ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಪ್ರಶಂಸೆ ವ್ಯಕ್ತಪಡಿಸಿ, ಕೃತಜ್ಞತಾ ಪತ್ರ ನೀಡಿದರು. ಈ ಸಂದರ್ಭದಲ್ಲಿ ಸ್ತ್ರೀ ರೋಗ ತಜ್ಞ ಡಾ. ಸಹನ್ ಕುಮಾರ್ ಉಪಸ್ಥಿತರಿದ್ದರು.