ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದ್ದು, ಪ್ರೋ ಪ್ಯಾಲೆಸ್ಟೈನ್ ಗುಂಪು ಈ ಕುಕೃತ್ಯ ಮೆರೆದಿದೆ.

ನಿನ್ನೆ ಬುಧವಾರ ರಾತ್ರಿ ವೇಳೆಗೆ ವಿವಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ವೆಬ್ ಸೈಟ್ ಹ್ಯಾಕ್ ಮಾಡಿದ್ದು,  ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್ ಎಂದು ವೆಬ್ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.

ಹ್ಯಾಕ್ ವಿಚಾರ ತಿಳಿದ ಬಳಿಕ ವಿವಿ ಟೆಕ್ನಿಕಲ್ ಟೀಂ ವೆಬ್ಸೈಟ್ ಸ್ಥಗಿತಗೊಳಿಸಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದೆ.