ಕುಮಟಾ: ಭಟ್ಕಳದ ಜೆಡಿಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ ಇಲ್ಲಿ ನಡೆದ ಪ್ರಜಾಧ್ವನಿ- 2 ಸಮಾವೇಶದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಇದನ್ನೂ ಓದಿ : ಮೋದಿ ನುಡಿದಂತೆ ನಡೆದಿದ್ದರೆ ಅವರನ್ನ ಬೆಂಬಲಿಸಿ: ಸಿದ್ದರಾಮಯ್ಯ
ಜೆಡಿಎಸ್‌ನಲ್ಲಿ ಇನಾಯತುಲ್ಲಾ ಶಾಬಂದ್ರಿ ಸಕ್ರಿಯರಾಗಿದ್ದರು. ಈ ಹಿಂದೆ ಚುನಾವಣೆಗೂ ಸ್ಪರ್ಧಿಸಿದ್ದರು. ಭಟ್ಕಳದ ಮುಸ್ಲಿಂ ಸಮುದಾಯದ ಪರಮೋಚ್ಛ ಸಂಸ್ಥೆ ತಂಜೀಮ್ ಅಧ್ಯಕ್ಷರೂ ಆಗಿರುವ ಅವರು, ಜೆಡಿಎಸ್‌ನಲ್ಲಿನ ಬೆಳವಣಿಗೆ ಕಂಡು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇನಾಯತ್ ಅವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್ ಸಾಕು. ತೆನೆ ತಂದ ಮಹಿಳೆಯನ್ನ ರಸ್ತೆಗೆ ಬಿಟ್ಟು ಬಿಜೆಪಿ ಸೇರಿದ್ದಾರೆ. ಈ ಹಗರಣವನ್ನೆಲ್ಲ ನೋಡಿ ಸಾಕು ಸಾಕೆನಿಸಿತು ಎಂದಿದ್ದಾರೆ ಎಂದರು.
ಕುಮಾರಸ್ವಾಮಿಯವರು ನಮ್ಮ ಹೆಣ್ಣುಮಕ್ಕಳು ಗ್ಯಾರಂಟಿಯಿಂದ ದಾರಿ ತಪ್ಪಿದ್ದಾರೆ ಎಂದಿದ್ದಾರೆ. ಹೀಗೆ ಹೇಳಿದ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಉತ್ತರ ಕೊಡಬೇಕೆಂದು ಇನಾಯತ್ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಸ್ವಾಗತಿಸುತ್ತೇನೆ. ಅವರ ಬೆಂಬಲಿಗರನ್ನೂ ಸ್ವಾಗತಿಸುತ್ತೇನೆ ಎಂದರು.