ಭಟ್ಕಳ: ಕೊರೊನಾ ಸಮಯದಲ್ಲಿ ಪ್ರಧಾನಮಂತ್ರಿ ಘೋಷಿಸಿದ ೨೦ ಲಕ್ಷ ಕೋಟಿ ಅನುದಾನದ ಪ್ಯಾಕೇಜ್ ಎಲ್ಲಿ ಹೋಯಿತೆಂದು ತಿಳಿದಿಲ್ಲ. ಅದು ಬರಿ ಘೋಷಣೆಯಾಗಿ ಉಳಿಯಿತು ಬಿಟ್ಟರೆ ಜಾರಿಗೆ ಬಂದಿಲ್ಲ. ಕೇವಲ ಧ್ವೇಷ, ಸುಳ್ಳು ಹೇಳಿ ಬಡವರನ್ನು ಮತ್ತಷ್ಟು ದಿನ ಮೋಸ ಮಾಡಲು ಸಾದ್ಯವಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಇದನ್ನೂ ಓದಿ : ಜೆಡಿಎಸ್ ತೊರೆದು ‘ಕೈ’ ಹಿಡಿದ‌ ಶಾಬಂದ್ರಿ

ಅವರು ಭಟ್ಕಳದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಡವರು ಹಸಿವಿನಿಂದ ಮಲಗಬಾರದು, ಕರ್ನಾಟಕ ಹಸಿವು ಮುಕ್ತ ಮಾಡಬೇಕೆಂದು ಅನ್ನಭಾಗ್ಯದಲ್ಲಿ ಅಕ್ಕಿ ಕೊಟ್ಟಿದ್ದು ಕಾಂಗ್ರೆಸ್. ಅಧಿಕಾರಕ್ಕೆ ಬಂದ ತಕ್ಷಣವೇ ಕ್ಯಾಬಿನೆಟ್‌ನಲ್ಲಿ ಡಿಸೈಡ್ ಮಾಡಿ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದೆವು. ಆದರೆ ಆಗಲೂ ಅನ್ನಭಾಗ್ಯಕ್ಕೆ ಅಕ್ಕಿ ಕೊಡದೆ ಜನರಿಗೆ ದ್ರೋಹ ಮಾಡಿದರು ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ರೈತರಿಗೆ ಉಚಿತ ವಿದ್ಯುತ್ ನೀಡಿದ್ದು ಕಾಂಗ್ರೆಸ್ ಸರ್ಕಾರ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆಂದವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದರು. ಇಂಧನಗಳ ಬೆಲೆ ಮೀತಿ ಮೀರಿ ಏರಿದೆ. ಇದರಿಂದ ಟ್ರಾನ್ಸ್ ಪೋರ್ಟ್ ಬೆಲೆ ಏರಿ ರಾಜ್ಯದಲ್ಲೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದಕ್ಕೆಲ್ಲ ಕೇಂದ್ರದ ಬಿಜೆಪಿಯೇ ನೇರ ಹೊಣೆ. ರೈತರ, ಬಡವರ ಸಾಲಮನ್ನಾ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಶ್ರೀಮಂತರ ಸಾಲ ಮನ್ನಾ ಮಾಡಿದೆ. ಬಡವರ ಕಿಸೆಗೆ ಕೈ ಹಾಕಿ ಆ ಹಣವನ್ನು ಶ್ರೀಮಂತರ ಉದ್ಧಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಸೂರು ಇಲ್ಲದವರಿಗೆ ಸೂರು, ಶಿಕ್ಷಣಕ್ಕೆ, ಕೃಷಿ ಹೀಗೆ ಹತ್ತು ಹಲವು ವಲಯದಲ್ಲಿ ಬಡವರ ಏಳಿಗೆಯನ್ನು ಬಯಸಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಅಶ್ರಫ್, ಬೇಬಿ ಕುಂದರ, ರಮಾನಂದ ಪೂಜಾರಿ, ಸರಸ್ವತಿ ಕಾಮತ, ಶಬ್ಬಿರ್, ಸುಲೇಮಾನ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ ನಾಯ್ಕ, ಇತರರು ಇದ್ದರು.