ಕುಮಟಾ: ಹಿಂದೆ ಕುಮಟಾ ವಕೀಲರ ಸಂಘದ ಸದಸ್ಯರಾಗಿದ್ದ, ಈಗ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ನ್ಯಾ. ಪ್ರವೀಣ ಆರ್. ನಾಯ್ಕ ಅವರನ್ನು ಕುಮಟಾ ವಕೀಲರ ಸಂಘದಿಂದ ಸನ್ಮಾನಿಸಲಾಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜೀವನದಲ್ಲಿ ಸತತ ಪ್ರಯತ್ನ ಮಾಡಿದರೆ ಯಾವ ಯಶಸ್ಸನ್ನು ಬೇಕಾದರೂ ಗಳಿಸಬಹುದು. ನಿಷ್ಠೆಯಿಂದ ಮತ್ತು ಏಕಾಗ್ರತೆಯಿಂದ ವಿಷಯಗಳನ್ನು ಗ್ರಹಿಸಿದರೆ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಇದನ್ನೂ ಓದಿ : ಬೋಟಿಂದ ಸಮುದ್ರದಲ್ಲಿ ಬಿದ್ದು ಮೀನುಗಾರ ಅಸ್ವಸ್ಥ
ಕಿರಿಯ ವಕೀಲರಿಗೆ ಮಾರ್ಗದರ್ಶನ ನೀಡಿದ ನ್ಯಾ. ಪ್ರವೀಣ ನಾಯ್ಕ, ಪ್ರತಿನಿತ್ಯ ಕನಿಷ್ಠ ಎರಡು ಗಂಟೆಯಾದರೂ ಕಾನೂನಿನ ವಿಷಯಗಳ ಬಗ್ಗೆ ಏಕಾಗ್ರತೆ ವಹಿಸಿ ಅಭ್ಯಾಸ ಮಾಡಬೇಕು. ಮುಂದೊಂದು ದಿನ ನಾನು ನ್ಯಾಯಾಧೀಶನಾಗುತ್ತೇನೆ ಎಂಬ ಛಲವಿರಬೇಕು. ಒಂದೇ ಸಲ ಫಲ ದೊರೆಯದಿದ್ದರೂ ತಿರುಗಿ ತಿರುಗಿ ಪ್ರಯತ್ನ ಮಾಡಿ ಗುರಿ ಮುಟ್ಟಬೇಕು ಎಂದರು.
ನ್ಯಾ. ಪ್ರವೀಣ ಆರ್. ನಾಯ್ಕ ಅವರ ಯಶಸ್ಸು ನಮ್ಮ ವಕೀಲರ ಸಂಘಕ್ಕೆ ಹೆಮ್ಮೆಯ ವಿಷಯ. ಈಗ ಯುವ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅವರು ದಾರಿದೀಪವಾಗಿದ್ದಾರೆ. ಅವರಂತೆ ನೀವೂ ಸಾಧನೆಯನ್ನು ಮಾಡಿ ನ್ಯಾಯಾಧೀಶರಾಗಿ ವಕೀಲರ ಸಂಘಕ್ಕೆ ಕೀರ್ತಿ ತರಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಆರ್. ಜಿ. ನಾಯ್ಕ ಕಿರಿಯ ವಕೀಲರಿಗೆ ಕಿವಿ ಮಾತು ಹೇಳಿದರು.
ವಕೀಲರಾದ ಆನಂದ ನಾಯ್ಕ, ಜಿ.ಸಿ.ನಾಯ್ಕ, ಎನ್.ಎಸ್.ಹೆಗಡೆ, ಅಶೋಕ ನಾಯ್ಕ, ರಫೀಕ್ ಎಮ್. ಡಿ., ಜಯಂತ ನಾಯ್ಕ ಮುಂತಾದವರು ನ್ಯಾ. ಪ್ರವೀಣ ನಾಯ್ಕರವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎಮ್.ಎಸ್.ಭಟ್, ಹಿರಿಯ ವಕೀಲರಾದ ಎಚ್. ವಿ. ಗಾಂವಕರ, ವಾಯ್. ವಿ. ಶಾನಭಾಗ, ಗಣೇಶ ರಾವ್, ಬಿ. ಡಿ. ಶ್ರೀನಾಥ, ಬಿ.ಎಸ್. ಉಮಾನಂದ, ಸಂಜಯ ಪಂಡಿತ, ಅರವಿಂದ ನಾಯ್ಕ, ಪ್ರಶಾಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ವಸುಂದರಾ ಶಾಸ್ತ್ರಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಿಶಾಂತ ನಾಯ್ಕ ಸ್ವಾಗತಿಸಿದರು. ಮೀನಾಕ್ಷಿ ನಾಯ್ಕ ನಿರೂಪಿಸಿದರು. ಮಮತಾ ನಾಯ್ಕ ಅತಿಥಿಗಳ ಪರಿಚಯಿಸಿದರು. ನಾಗರಾಜ ಹೆಗಡೆ ವಂದಿಸಿದರು.