ಕುಮಟಾ: ಈ ಸಲ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಮಟಾ ತಾಲೂಕಿನ ಪ್ರತಿಶತ ಪರಿಮಾಣಾತ್ಮಕ ಫಲಿತಾಂಶ ಶೇ. ೯೩.೦೭ ಆಗಿದ್ದು, ಪ್ರತಿಶತ ಗುಣಾತ್ಮಕ ಫಲಿತಾಂಶ ಶೇ.೭೭.೩೨ರೊಂದಿಗೆ ‘ಎ’ ಶ್ರೇಣಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ತಿಳಿಸಿದ್ದಾರೆ.
ಇದನ್ನೂ ಓದಿ : ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆ ಗಣನೀಯ ಸಾಧನೆ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಜರಾದ ೧೦೧೯ ಗಂಡು ಹಾಗೂ ೧೦೮೭ ಹೆಣ್ಣು ಸೇರಿದಂತೆ ಒಟ್ಟೂ ೨೧೦೬ ವಿದ್ಯಾರ್ಥಿಗಳಲ್ಲಿ ೧೯೬೦ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪಾಸಾದವರಲ್ಲಿ ೯೨೦ ಗಂಡು ಹಾಗೂ ೧೦೪೦ ಹೆಣ್ಣುಮಕ್ಕಳು ಇದ್ದಾರೆ. ಶೇ.೧೦೦ ಫಲಿತಾಂಶವನ್ನು ೧ ಸರ್ಕಾರಿ ಪ್ರೌಢಶಾಲೆ, ಸಮಾಜ ಕಲ್ಯಾಣ ಇಲಾಖೆಯ ೨ ಶಾಲೆ, ೬ ಅನುದಾನ ರಹಿತ ಶಾಲೆ ಗಳಿಸಿವೆ. ಅನುದಾನಿತ ಯಾವ ಶಾಲೆಯೂ ಶೇ.೧೦೦ ಫಲಿತಾಂಶ ಪಡೆದುಕೊಂಡಿಲ್ಲ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ : ಏಳು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ರ‍್ಯಾಂಕ್, ಶೇ.೧೦೦ ಫಲಿತಾಂಶ
ಸಿ.ವಿ.ಎಸ್.ಕೆ ಪ್ರೌಢಶಾಲೆಯ ಕಾರ್ತಿಕ ರಾವುತ್ಕರ್(೬೨೧), ಭೂಮಿಕ ನಾಯ್ಕ(೬೨೦), ವೈಷ್ಣವಿ ನಾಯ್ಕ(೬೧೯), ಸುನಂದಾ ಶಾನಭಾಗ(೬೧೯), ರೋಶನಿ.ಆರ್(೬೧೭), ವೈಷ್ಣವಿ ನಾಗೇಕರ(೬೧೬), ಕನ್ನಿಕಾ ಭಟ್ಟ(೬೧೬), ಮೇಘನಾ ನಾಯ್ಕ(೬೧೫), ಜೀವನ ನಾಯ್ಕ(೬೧೫), ತ್ರಿಷಾ ನಾಯ್ಕ(೬೧೫), ನಂದಿನ ನಾಯಕ(೬೧೫), ನಮೃತಾ ಭಂಡಾರಕರ್(೬೧೩), ವೈಷ್ಣವಿ ಹೆಗಡೆ(೬೧೩), ನಿತ್ಯಾ ದಿಂಡೆ(೬೧೨), ದೀಪ್ತಿ ನಾಯಕ(೬೧೨), ಪಾವನಿ ನಾಯ್ಕ(೬೧೨), ಸಂಜನಾ ಪಂಡಿತ(೬೧೨), ವಲ್ಲಭ ಭಟ್ಟ(೬೧೨), ಕೃತಿಕಾ ಗಾಂವ್ಕರ(೬೧೧) ಹಾಗೂ ನಿರ್ಮಲಾ ಕಾನ್ವೆಂಟ್‌ನ ಪ್ರೀತಿ ಬೆಣ್ಣೆ(೬೧೪), ಸಾರ್ವಭೌಮ ಗುರುಕುಲಂ ನ ಪನ್ನಗ ಭಟ್ಟ(೬೧೩), ನಿರ್ಮಲಾ ಕಾನ್ವೆಂಟ್‌ನ ಸ್ನೇಹಾ ಕಿಣಿ(೬೧೧) ಅಗ್ರ ೧೦ರ ಪಟ್ಟಿಯಲ್ಲಿ ಇದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.