ಭಟ್ಕಳ: ಜಗನ್ಮಾತಾ ಕಡವಿನಕಟ್ಟೆ ದುರ್ಗಾಪರಮೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ಮೇ ೧೩ ಮತ್ತು ೧೪ರಂದು ನಡೆಯಲಿದೆ. ಅದರಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ಭಟ್ಟ ತಿಳಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮೇ ೧೩ ರಂದು ದೇವತಾ ಪ್ರಾರ್ಥನೆ, ನಾಂದಿ, ಪುಣ್ಯಾಹ, ಪ್ರಧಾನ ಸಂಕಲ್ಪ, ಸ್ನಪನ, ಕಲಶಾವಾಸ, ಹವನ ಶಕ್ತಿ, ತತ್ವ ಕಲಾವೃದ್ಧಿ ಹವನ, ಚಂಡೀ ಪಾರಾಯಣ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಇದನ್ನೂ ಓದಿ : ಜೂನ್ ೨೯ರಿಂದ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ
ಮೇ ೧೪ರಂದು ಗಣಪತಿ ಪೂಜೆ, ಪುಣ್ಯಾಹ, ನವಚಂಡಿಯಾಗ, ಪೂರ್ಣಾಹುತಿ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.