ಭಟ್ಕಳ : ಭಟ್ಕಳದ ಚಿನ್ನದ ಅಂಗಡಿ ಮಾಲೀಕನೋರ್ವನಿಗೆ ಮೀಶೋ ಆನ್ಲೈನ್ ಶಾಪಿಂಗ್ ಕಂಪನಿಯ ಹೆಸರಲ್ಲಿ ಲಕ್ಕಿ ಡ್ರಾ ಕೂಪನ್ ಕಳುಹಿಸಿ ವಂಚಿಸಲು ಯತ್ನಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಸೋನಾರಕೇರಿ ನಿವಾಸಿ ಚಿನ್ನದ ಅಂಗಡಿ ಮಾಲೀಕ ವಿನಾಯಕ ಶೇಟ ಎನ್ನುವರು ಮೀಶೋ
ಆನ್ಲೈನ್ ಅಪ್ಲಿಕೇಶನ್ ನಲ್ಲಿ ಸಾಮಾನ್ಯವಾಗಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಮೇ ೧೫ರಂದು ಅವರ ಚಿನ್ನದ ಅಂಗಡಿ ವಿಳಾಸಕ್ಕೆ ಒಂದು ರಿಜಿಸ್ಟರ್ ಪೋಸ್ಟ್ ಬಂದಿತ್ತು. ಅದರಲ್ಲಿ ಒಂದು ಪತ್ರ ಹಾಗೂ ಒಂದು ಲಕ್ಕಿ ಡ್ರಾ ಕೂಪನ್ ಇವೆ. ಮೊದಲ ಬಹುಮಾನ ೧೪,೭೫,೦೦೦, ದ್ವಿತೀಯ ಬಹುಮಾನ ಮಾರುತಿ ಸುಜುಕಿ ಆಲ್ಟೋ 800 ವಾಹನ, ತೃತೀಯ ಬಹುಮಾನ ಆಕ್ಟಿವಾ ಸ್ಕೂಟಿ ಎಂದು ಕೂಪನ್ ನಲ್ಲಿ ಮುದ್ರಿಸಲಾಗಿದೆ.
ಇದನ್ನೂ ಓದಿ : ಮೋಸ ಹೋಗುವುದರಿಂದ ಪಾರಾದ ಭಟ್ಕಳದ ಉದ್ಯಮಿ
ಪತ್ರದಲ್ಲೇನಿದೆ?
ಮೀಶೋ ಆನ್ಲೈನ್ ಶಾಪಿಂಗ್ ನ 8ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಂಪನಿಯು ನೋಂದಾಯಿತ ಗ್ರಾಹಕರಿಗಾಗಿ ಲಕ್ಕಿ ಡ್ರಾ ಸ್ಪರ್ಧೆ ಆಯೋಜಿಸಿದೆ. ಕಂಪನಿಯು ಆಯ್ಕೆಮಾಡಿದ ಅಮೂಲ್ಯವಾದ ಅದೃಷ್ಟಶಾಲಿ ಗ್ರಾಹಕರಲ್ಲಿ ನೀವೂ ಒಬ್ಬರು ಎಂದು ಹೇಳಲು ನಮಗೆ ಸಂತೋಷವಾಗಿದೆ. ಆದರೆ ಬಹುಮಾನಗಳನ್ನು ಕ್ಲೇಮ್ ಮಾಡಲು ನಿಯಮಗಳು ಮತ್ತು ಷರತ್ತುಗಳಿವೆ. ಕೂಪನ್ ಸ್ಕ್ರ್ಯಾಚ್ ಮಾಡಿದ ನಂತರ ನೀವು ಯಾವುದೇ ಬಹುಮಾನವನ್ನು ಗೆದ್ದರೆ ಸಣ್ಣ ಪರಿಶೀಲನೆ ಪ್ರಕ್ರಿಯೆ ಇರುತ್ತದೆ. ಪರಿಶೀಲನೆ ಪ್ರಕ್ರಿಯೆಗಾಗಿ ನೀವು ಡಾಕ್ಯುಮೆಂಟ್ ಗಳ ಫೋಟೋ ಪ್ರತಿಗಳನ್ನು ಕಳುಹಿಸಬೇಕು. ಸ್ಕ್ಯಾಚ್ ಕಾರ್ಡ್, ಪತ್ರ, ಎನ್ವೆಲಪ್ ಮತ್ತು ಯಾವುದಾದರೂ ಒಂದು ಸರ್ಕಾರ ಗ್ರಾಹಕರ ಐಡಿ ಪುರಾವೆಯನ್ನು ನೀಡಬೇಕಿದೆ. ನಮ್ಮ ೮ ನೇ ವರ್ಷದ ವಾರ್ಷಿಕೋತ್ಸವದಲ್ಲಿ ನಾವು ಸಂಪೂರ್ಣವಾಗಿ ೨೦ ಅತ್ಯಾಕರ್ಷಕ ಬಹುಮಾನಗಳನ್ನು ಹೊಂದಿದ್ದೇವೆ. ಅದರಲ್ಲಿ ಮೊದಲ ೩ ಬಹುಮಾನಗಳು ದೊಡ್ಡ ಬಹುಮಾನಗಳು ಮತ್ತು ಉಳಿದ ೧೭ ಬಹುಮಾನಗಳು ಸಾಮಾನ್ಯ ಬಹುಮಾನಗಳಾಗಿವೆ. ನೀವು ಯಾವುದೇ ದೊಡ್ಡ ಬಹುಮಾನವನ್ನು ಗೆದ್ದರೆ ಅದರ ಮೇಲೆ ತೆರಿಗೆಗಳು ಅನ್ವಯವಾಗುತ್ತವೆ ಮತ್ತು ಇತರ ಸಾಮಾನ್ಯ ಬಹುಮಾನಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
Helpline number – C.R.I OFFICER : Sudharshan, CONTACT : 7774887204,
WHATSAPP: 9433032330 ಎಂದೂ ಬರೆಯಲಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಚಿನ್ನದ ಅಂಗಡಿ ಮಾಲೀಕ ವಿನಾಯಕ ಶೇಟ್ ರಿಜಿಸ್ಟರ್ ಪೋಸ್ಟ್ ನಲ್ಲಿ ಬಂದ ಲಕ್ಕಿ ಡ್ರಾ ಕೂಪನ್ ಸ್ಕ್ರ್ಯಾಚ್ ಮಾಡಿದಾಗ ಮೊದಲ ಬಹುಮಾನ ೧೪,೭೫,೦೦೦ ಬಂದಿದ್ದು ನೋಡಿ ಒಂದು ಕ್ಷಣ ಸಂತೋಷ ಪಟ್ಟರು. ನಂತರ ಅದರಲ್ಲಿ ನಂಬರ್ ಗೆ ಕೆರೆ ಮಾಡಿದರೆ ಅಲ್ಲಿಂದ ಯಾವುದೆ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಸ್ವಲ್ಪ ಸಮಯದ ಬಳಿಕ ಅದೇ ನಂಬರಿನಿಂದ ಪುನಃ ಮರಳಿ ಕರೆ ಬಂದಾಗ ನೀವು ಬಹುಮಾನ ಪಡೆದುಕೊಳ್ಳಲು ದೆಹಲಿಗೆ ಬರಬೇಕು ಮತ್ತು ಬಹುಮಾನ ಪಡೆದುಕೊಳ್ಳಲು ಹಣದ ಬೇಡಿಕೆ ಇಟ್ಟಿದ್ದಾರೆ. ನಂತರ ಇದು ಫೇಕ್ ಎಂದು ಅರಿತ ವಿನಾಯಕ ಶೇಟ್ ಕರೆ ಕಟ್ ಮಾಡಿದ್ದಾರೆ.
ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇಂತಹ ಮೋಸಗಳಿಗೆ ಯಾರೂ ಬಲಿಯಾಗಬೇಡಿ.
– ವಿನಾಯಕ ಶೇಟ, ಸೋನಾರಕೇರಿ ನಿವಾಸಿ