ಭಟ್ಕಳ : ೨೦೨೨-೨೩ನೇ ಸಾಲಿನಲ್ಲಿ ಭಟ್ಕಳ ರೋಟರಿ ಕ್ಲಬ್‌ನ ಸಹಭಾಗಿತ್ವದಲ್ಲಿ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ ರೋಟರಾಕ್ಟ್ ಕ್ಲಬ್‌ ಆಫ್ ಭಟ್ಕಳ ರೋಟರಾಕ್ಟ್ ಅಂತರ್ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಸಂಘಟಿಸಿದ್ದಕ್ಕೆ “ಉತ್ತಮ ಅಂತರ್ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಪ್ರಶಸ್ತಿ” ದೊರೆತಿದೆ.

ಇದನ್ನೂ ಓದಿ : ಮನೆಯೊಳಗೆ ನುಗ್ಗಿದ ಮಳೆ‌ ನೀರು, ಕತ್ತಲಲ್ಲಿ ಭಟ್ಕಳ

ಜೊತೆಗೆ ಗೋವಾದ ಸಂಖಲೀಮ್‌ನಲ್ಲಿ ಜರುಗಿದ ೫೨ನೇ ರೋಟರಾಕ್ಟ್ ಜಿಲ್ಲಾ ಸಮಾವೇಶದಲ್ಲಿ ಆಯೋಜಿಸಲ್ಪಟ್ಟ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ರಕ್ಷಿತ್ ನಾಯ್ಕ್ ನೇತೃತ್ವದ ಯಕ್ಷಗಾನ ತಂಡವು ವಿಜಯಿಯಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ, ಟ್ರಸ್ಟಿ ವ್ಯವಸ್ಥಾಪಕ ರಾಜೇಶ ನಾಯಕ, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪ್ರಾಂಜಲ್ ಮರಾಠೆ, ಭಟ್ಕಳ ರೋಟರಿ ಕ್ಲಬ್ ಅಧ್ಯಕ್ಷ ಡಾ. ಎಂ. ವಿ ಭಾವಿಕಟ್ಟಿ, ಪ್ರಾಂಶುಪಾಲ ಶ್ರೀನಾಥ ಪೈ, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ, ಕ್ಲಬ್ ಅಧ್ಯಕ್ಷೆ ವೈಷ್ಣವಿ ನಾಯ್ಕ, ಕಾರ್ಯದರ್ಶಿ ಪ್ರಜ್ಞಾ ಗೋಲಿ, ರೋಟರಿ ಕ್ಲಬ್ ಪದಾಧಿಕಾರಿಗಳು, ರೋಟರಾಕ್ಟ್ ಕ್ಲಬ್ ಆಫ್ ಭಟ್ಕಳ ಪದಾಧಿಕಾರಿಗಳು, ಬೋಧಕ- ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.