ಭಟ್ಕಳ: ಕುಟುಂಬದ ಆಸರೆಯಾಗಿದ್ದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದ್ದು, ಅವರ ಮನೆಗೆ ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ತೆರಳಿ ಬಡ ಕುಟುಂಬಕ್ಕೆ ಸಾಂತ್ವನ ಹೇಳಿ ಧನಸಹಾಯ ಮಾಡಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ತಾಲೂಕಿನ ಬೈಲೂರಿನ ವಸಂತ ದೇವಡಿಗ ಅನಾರೋಗಕ್ಕೆ ತುತ್ತಾಗಿ ಮರಣ ಹೊಂದಿದ್ದರು. ಮನೆಯಲ್ಲಿ ಪತ್ನಿ ಮತ್ತು ಎರಡು ಮಕ್ಕಳು ಅನಾಥರಾಗಿದ್ದರು. ಎರಡು ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ಬಂದಿತ್ತು ಆಸರೆ ಇಲ್ಲದೆ ಕುಟುಂಬ ಸಂಕಷ್ಟ ಅನುಭವಿಸುತಿತ್ತು. ವಿಷಯ ತಿಳಿದ ಸ್ಥಳೀಯರು ಸಚಿವ ಮಂಕಾಳ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮಗಳು ಬೀನಾ ವೈದ್ಯರನ್ನು ಅವರ ಮನೆಗೆ ಕಳುಹಿಸಿ ಬಡ ಕುಟುಂಬಕ್ಕೆ ನೆರವಾಗಿ ಸಾಂತ್ವನ ಹೇಳಿ ಸಹಾಯವನ್ನು ಮಾಡಿದ್ದಾರೆ.

ಇದನ್ನೂ ಓದಿ : ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರು ಹೊತ್ತೊಯ್ದ ಚಿರತೆ

ಕುಟುಂಬದ ಸ್ಥಿತಿ ಅರಿತ ಬೀನಾ ವೈದ್ಯ ಇಬ್ಬರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಂಡು ಆ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಜಿಲ್ಲೆಯ ಜವಾಬ್ದಾರಿ, ಒತ್ತಡದ ನಡುವೆಯೂ ಜನಸಾಮಾನ್ಯರು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ ಎಂದ ಕೂಡಲೆ ಪುತ್ರಿಯನ್ನು ಕಳುಹಿಸಿ ಸಹಾಯ ಹಸ್ತ ಚಾಚಿದ ಸಚಿವರ ನಡೆಗೆ ಎಲ್ಲಡೆ ಪ್ರಶಂಶೆ ವ್ಯಕ್ತವಾಗಿದೆ.