ಭಟ್ಕಳ: ತಾಲೂಕಿನ ಮುರ್ಡೇಶ್ವರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶುಕ್ರವಾರ ವರ್ಧಂತಿ ಉತ್ಸವ ಮತ್ತು ರಜತ ದ್ವಾರ ಸಮರ್ಪಣೆ ಸಮಾರಂಭ ನಡೆಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಸಂದರ್ಭದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ, ನೀಡಿದ ಯಾವುದೇ ದಾನ ವ್ಯರ್ಥವಾಗುವದಿಲ್ಲ. ಅದು ಯಾವುದಾದದರೂ ರೂಪದಲ್ಲಿ ಉಪಯೋಗಕ್ಕೆ ಬರುತ್ತದೆ. ಅಂದು ಹಿರಿಯರು ಮಾಡಿದ ದಾನ ಇಂದು ನಿಮಗೆ ದಕ್ಕಿದ್ದು, ನೀವು ಮಾಡಿದ ದಾನವೂ ಮುಂದೆ ನಿಮ್ಮ ಹಾಗೂ ನಿಮ್ಮ ಪೀಳಿಗೆಗೆ ದಕ್ಕಲಿದೆ. ಈ ವಿಶ್ವಾಸವನ್ನು ನೀವು ಇಟ್ಟುಕೊಳ್ಳಬಹುದು ಎಂದು ಹೇಳಿದರು.
ಇದನ್ನೂ ಓದಿ : ಬಡ ಕುಟುಂಬಕ್ಕೆ ಆಸರೆಯಾದ ಸಚಿವ ಮಂಕಾಳ
ದಾನದಿಂದ ಗೌರವವೂ ದೊರಕುತ್ತದೆ. ಹಣವನ್ನು ದಾನದಿಂದ ವಿನಿಯೋಗ ಮಾಡಿದರೆ ಮಾತ್ರ ಗೌರವ. ಇಂದು ರಜತದ್ವಾರಕ್ಕೆ ದಾನ ನೀಡಿದವರಿಗೆ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಗೌರವಿಸುತ್ತಿದ್ದಾರೆಯೇ ಹೊರತು ಕೋಟಿಗಟ್ಟಲೆ ಹಣವಿದ್ದವರಿಗೆ ಇಲ್ಲಿ ಗೌರವ ದೊರಕುತ್ತಿಲ್ಲ. ಒಂದು ಸಮಯದಲ್ಲಿ ನಂದಾ ದೀಪ ಹಚ್ಚಲು ಕಷ್ಟದ ಸ್ಥಿತಿ ಇದ್ದಿದ್ದು, ಇಂದು ಬೆಳ್ಳಿಯನ್ನು ದಾನ ಮಾಡುವ ಮಟ್ಟಕ್ಕೆ ಬೆಳೆದಿರುವದು ನಿಜಕ್ಕೂ ಅಭಿಮಾನದ ಸಂಗತಿ ಎಂದರು.
ಮುರ್ಡೇಶ್ವರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಮೇ ೨೦ರಂದು ಆರಂಭವಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ೨೪ರವರೆಗೆ ನಡೆದವು. ನಂತರ ಶ್ರೀಗಳನ್ನು ಮುಂದಿನ ಮೊಕ್ಕಾಂಗೆ ಬೀಳ್ಕೊಡಲಾಯಿತು. ಮೇ ೨೨ರಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿಯವರು ಶ್ರೀ ದೇವರ ಗರ್ಭಗುಡಿಗೆ ರಜತದ್ವಾರ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಅಧ್ಯಕ್ಷ ಸುಂದರ ಕಾಮತ, ಸೆಕ್ರೆಟರಿ ಉಮೇಶ ಕಾಮತ, ಟ್ರಸ್ಟಿಗಳಾದ ವಿಶ್ವನಾಥ ಕಾಮತ, ನಾಗಪ್ಪ ಕಾಮತ, ಮಹಿಳಾ ಮಂಡಲದ ಅಧ್ಯಕ್ಷೆ ಸೀಮಾ ಕಾಮತ ಸೇರಿ ನೂರಾರು ಸಂಖ್ಯೆಯಲ್ಲಿ ಸಮಾಜದ ಭಕ್ತರು ಇದ್ದರು.