ಭಟ್ಕಳ: ಇಲ್ಲಿನ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್(ಎಐಟಿಎಂ) ಇದರ ೪೪ನೇ ಕಾಲೇಜು ವಾರ್ಷಿಕೋತ್ಸವ ಮತ್ತು ೪೦ನೇ ಪದವಿ ದಿನಾಚರಣೆ ರವಿವಾರದಂದು ನಡೆಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ರವಿವಾರ ನಡೆದ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಅದೇ ರೀತಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೂ ಇದೇ ವೇಳೆ ಬಹುಮಾನ ವಿತರಿಸಲಾಯಿತು.

ಇದನ್ನೂ ಓದಿ : ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ; ಸವಾರ ಸ್ಥಳದಲ್ಲೇ ಸಾವು

ಈ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಅತಿಥಿಗಳು, ಮುಂದಿನ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮಾಜಿ ಉಪಾಧ್ಯಕ್ಷ ಮೇಜರ್ ಡಾ. ಮೊಹಮ್ಮದ್ ಜುಬೇರ್ ಕೋಲಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಣಿಪಾಲ ಎಂಐಟಿಯ ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ವಿ. ರಾಮಚಂದ್ರ ಮೂರ್ತಿ ಆಗಮಿಸಿದ್ದರು. ಎ.ಎಚ್.ಎಂ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಶಾಕ್ ಶಾಬಂದ್ರಿ, ಎಐಟಿಎಂ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್, ಅಂಜುಮನ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಕೆ.ಫಜಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ, ಡಾ ಅನಂತಮೂರ್ತಿ ಶಾಸ್ತ್ರಿ ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಅನ್ವರ್ ವಂದಿಸಿದರು.

ಎಐಟಿಎಂ ಕಾಲೇಜು ೪೪ ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ. ಎ.ಐ ಎಂ.ಎಲ್. ಡಾಟಾ ಸೈನ್ಸ್, ರೋಬೋಟಿಕ್ ಸೇರಿದಂತೆ ಹೊಸ ಹೊಸ ವಿಭಾಗಗಳಿಂದ ಗಮನಸೆಳೆಯುತ್ತಿದೆ. ಅದೇ ರೀತಿ ಪ್ರತಿಷ್ಠಿತ ಕಂಪನಿಗಳನ್ನು ತಮ್ಮತ್ತ ಆಕರ್ಷಿಸುವಂತೆ ಮಾಡಿದ್ದು, ಪ್ಲೇಸ್ ಮೆಂಟ್, ಕ್ಯಾಂಪಸ್ ಸೌಲಭ್ಯ ಹೊಂದಿದೆ. ಈ ಕಾಲೇಜು ಜಿಲ್ಲೆಯಲ್ಲಿಯೇ ಉತ್ತಮ ರೀತಿಯಲ್ಲಿ ಮುನ್ನಡೆದುಕೊಂಡು ಹೋಗುತ್ತಿದೆ.