ಭಟ್ಕಳ: ಹಿಂಸಾತ್ಮಕವಾಗಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿರುವ ಘಟನೆ ಭಟ್ಕಳ ತಾಲೂಕಿನ ಸಾಗರ ರಸ್ತೆ ಗುಳ್ಮಿ ಸಮೀಪ ನಡೆದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಆರೋಪಿಗಳನ್ನು ತಾಲೂಕಿನ ಪುರವರ್ಗ ನಿವಾಸಿ ಮಾಸ್ತಪ್ಪ ಜಟ್ಟಪ್ಪ ನಾಯ್ಕ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾನಕುಳಿ ನಿವಾಸಿಗಳಾದ ಚಾಲಕ ರಾಜೇಂದ್ರ ಚಂದಯ್ಯ, ವಿಷ್ಣು ಮಂಜ ನಾಯ್ಕ ಎಂದು ತಿಳಿದು ಬಂದಿದೆ. ಸದ್ಯ ಮೂರು ಕೋಣಗಳನ್ನು ರಕ್ಷಣೆ ಮಾಡುವುದರೊಂದಿಗೆ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ : ಪರೀಕ್ಷೆ ಮುಗಿದ ಬೆನ್ನಲ್ಲೇ ಫಲಿತಾಂಶ ಪ್ರಕಟ : ಹೊಸ ದಾಖಲೆ ಬರೆದ ವಿಟಿಯು

ಇವರು ಗುರುವಾರ ರಾತ್ರಿ ೭.೪೫ರ ಸುಮಾರಿಗೆ ಮಹೀಂದ್ರಾ ಮ್ಯಾಕ್ಸ್ ವಾಹನ ಸಂಖ್ಯೆ ಕೆಎ೧೭-ಎ೪೫೧೩ರಲ್ಲಿ ಸುಮಾರು ೪೦ ಸಾ.ರೂ. ಮೌಲ್ಯದ ಮೂರು ಕೋಣಗಳನ್ನು ಹಿಂಸಾತ್ಮಕವಾಗಿ ಕಟ್ಟಿಕೊಂಡು ಕಾನೂನು ಬಾಹಿರವಾಗಿ ಸಾಗಾಟ ಮಾಡಲು ಪ್ರಯತ್ನಿಸಿದ್ದರು. ಪರವಾನಿಗೆ ಪಡೆಯದೇ ಭಟ್ಕಳ-ಸಾಗರ ರಸ್ತೆಯ ಗುಳ್ಳಿ ಕ್ರಾಸ್ ಸಮೀಪ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ವೇಳೆ ೧ ಮತ್ತು ೨ನೇ ಆರೋಪಿಯನ್ನು ಬಂಧಿಸಿದ್ದಾರೆ. ೩ನೇ ಆರೋಪಿ ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಠಾಣೆಗೆ ಮುತ್ತಿಗೆ :
ಭಟ್ಕಳ ತಾಲೂಕಿನಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ಸರಿಯಾಗಿ ತಪಾಸಣೆ ಮಾಡುತ್ತಿಲ್ಲ. ಭಟ್ಕಳಕ್ಕೆ ಅಕ್ರಮ ಗೋವುಗಳ ಸಾಗಾಟ ಹೆಚ್ಚಾಗುತ್ತಿದೆ ಎಂದು ಹಿಂದೂ ಪರ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಚೆಕ್ ಪೋಸ್ಟನ್ನು ಹೆಚ್ಚು ತಪಾಸಣೆ ನಡೆಸುವಂತೆ ಗ್ರಾಮೀಣ ಠಾಣೆಯ ಪೊಲೀಸರನ್ನು ಆಗ್ರಹಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಹಿಂದೂ ಪರ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳದಿದೆ. ಹಿಂದೂ ಕಾರ್ಯಕರ್ತನನ್ನು ಓರ್ವ ಪೊಲೀಸ್ ಸಿಬ್ಬಂದಿ ಎಳೆದಾಡಿದ್ದಾರೆ ಎಂದು ಹಿಂದೂ ಪರ ಕಾರ್ಯಕರ್ತರು ಆರೋಪಿಸಿದ್ದಾರೆ. ಪೊಲೀಸ ಠಾಣೆ ಮುಂಭಾಗದಲ್ಲಿ ಪೊಲೀಸರಿಗೂ ಹಾಗೂ ಹಿಂದೂ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.