ಭಟ್ಕಳ: ಪಟ್ಟಣದ ನೆಹರು ರಸ್ತೆಯಲ್ಲಿರುವ ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ೨೧ನೇ ಪುನರ್ ಪ್ರತಿಷ್ಠಾ ವರ್ಧಂತಿ ಉತ್ಸವ ಅತಿ ಭಕ್ತರ ಹರ್ಷೋದ್ಘಾರಗಳ ನಡುವೆ ಅತಿ ವಿಜೃಂಭಣೆಯಿಂದ ಶುಕ್ರವಾರ ಸಂಪನ್ನಗೊಂಡಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ವರ್ಧಂತಿ ಉತ್ಸವದ ಅಂಗವಾಗಿ ಶ್ರೀ ದೇವತಾ ಪ್ರಾರ್ಥನೆ, ಗಣಪತಿ ಪೂಜನ, ಪುಣ್ಯಾಹವಾಚನ, ಸ್ಥಳ ಶುದ್ದಿ, ಶತಕಲಶಾರ್ಚನೆ, ಶ್ರೀ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣೆ, ಹವನ, ಪಂಚದುರ್ಗಾ ಹವನ ನಡೆಯಿತು. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂರ್ಣಾಹುತಿ, ಮಹಾಪೂಜೆ, ಮಹಾಮಂಗಳಾರತಿ ನಡೆಯಿತು. ಸಂಜೆ ಪಲ್ಲಕ್ಕಿ ಉತ್ಸವ, ಅಷ್ಠಾವಧಾನ ಸೇವೆ, ವಸಂತ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ವೇ.ಮೂ. ವಿನೋದ ಭಟ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನಡೆಯಿತು. ಆಡಳಿತ ಮಂಡಳಿ ಸದಸ್ಯರು, ಕುಳಾವಿ ಭಜಕರು ಹಾಗೂ ಸಮಾಜ ಬಾಂಧವರು ಸಹಕರಿಸಿದರು.

ಇದನ್ನೂ ಓದಿ : ಹಿಂಸಾತ್ಮಕವಾಗಿ ಕೋಣ ಸಾಗಾಟ ಯತ್ನ ; ಇಬ್ಬರ ಬಂಧನ, ಓರ್ವ ಪರಾರಿ