ಗೋಕರ್ಣ : ಇಲ್ಲಿನ ಹೃದಯ ಭಾಗವಾದ ಕೆಡಿಸಿಸಿ ಮತ್ತು ಕೆನರಾ ಬ್ಯಾಂಕ್ ಬಳಿ ಬಸ್ ನಿಲುಗಡೆ ನಾಮಫಲಕ ಉದ್ಘಾಟನೆಗೊಂಡಿತು. ಖ್ಯಾತ ಜ್ಯೋತಿಷಿ, ಕಾರ್ಮಿಕ ಮುಖಂಡ ಸಿದ್ದೇಶ್ವರದ ಪ್ರವೀಣಬಾಬು ಮಹಾಲೆ ಮತ್ತು ಗೋಕರ್ಣ ಗ್ರಾಮ ಪಂಚಾಯತ ಅಧ್ಯಕ್ಷೆ ಸುಮನಾ ಗೌಡ ದೀಪ ಬೆಳಗಿಸಿ ನಾಮಫಲಕ ಉದ್ಘಾಟಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಇಲ್ಲಿನ ಬಸ್ ನಿಲುಗಡೆಯು ಈ ಹಿಂದೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಗ್ರಾಮ ಪಂಚಾಯತ ಸದಸ್ಯ ಸುಜಯ ಶೆಟ್ಟಿ ಅವರು ನಿರಂತರ ಹೋರಾಟ ಮಾಡಿದ್ದರು. ಬಸ್ ನಿಲುಗಡೆ ನಾಮಫಲಕ ಉದ್ಘಾಟನೆ ಸಂದರ್ಭದಲ್ಲಿ ಸುಜಯ ಶೆಟ್ಟಿಯವರನ್ನು ಗೋಕರ್ಣದ ಸ್ಥಳೀಯರು ಸನ್ಮಾನಿಸಿದರು.

ಇದನ್ನೂ ಓದಿ : ವಧೆ ಮಾಡುವ ಉದ್ದೇಶದಿಂದ ತಂದಿದ್ದ ಎತ್ತುಗಳ ರಕ್ಷಣೆ

ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣಬಾಬು ಮಹಾಲೆ, ಗೋಕರ್ಣದ ಕೆಡಿಸಿಸಿ, ಕೆನರಾ ಬ್ಯಾಂಕಿನ ಸಮೀಪ ಬಸ್ ನಿಲುಗಡೆ ಹಿಂದಿನಿಂದ ಇತ್ತು. ಆದರೆ ೨೦೧೬ರಲ್ಲಿ ಕಾರಣಾಂತರದಿಂದ ಈ ನಿಲುಗಡೆಯನ್ನು ನಿಲ್ಲಿಸಲಾಗಿತ್ತು. ಸಾರ್ವಜನಿಕರು ಈ ಬಗ್ಗೆ ಅಸಮಾಧಾನ ತೋಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಆದರೆ ಸುಜಯ ಶೆಟ್ಟಿಯವರು ತಮ್ಮ ಹೋರಾಟವನ್ನು ನಿಲ್ಲಿಸದೆ ಜಿಲ್ಲಾಧಿಕಾರಿಗೆ, ಶಾಸಕರಿಗೆ, ಮಂತ್ರಿಗಳಿಗೆ ನಿರಂತರ ಮನವಿ ಸಲ್ಲಿಸುತ್ತ ಬಂದಿದ್ದರು. ಕೊನೆಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಹೋರಾಟ ನಡೆಸಿ ಈ ನಿಲುಗಡೆಯನ್ನು ತಂದಿದ್ದಾರೆ ಎಂದು ಶ್ಲಾಘಿಸಿದರು.

ಬಸ್ ನಿಲುಗಡೆ ನಾಮಫಲಕ ಉದ್ಘಾಟನೆ ಸಂದರ್ಭದಲ್ಲಿ ಗೋಕರ್ಣ ಗ್ರಾಮ ಪಂಚಾಯತ ಸದಸ್ಯ ಸುಜಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕುಮಟಾ ಎಪಿಎಂಸಿ ಮಾಜಿ ನಿರ್ದೇಶಕಿ ಸುಮಿಕ್ಷಾ ಸುಜಯ ಶೆಟ್ಟಿ, ಗಜಸೇನೆ ಅಧ್ಯಕ್ಷ ರವಿ ಹೊಸ್ಕಟ್ಟಾ, ಶ್ವೇತಾ ಪ್ರವೀಣ ಸಿದ್ಧೇಶ್ವರ, ರಜತ ಪಿ. ಸಿದ್ಧೇಶ್ವರ, ವಸಂತ ಶೆಟ್ಟಿ, ವಿನಾಯಕ ಸಭಾಯತ, ನಿರಂಜನ ಭಂಡಾರಿ, ಸುಬ್ರಾಯ ವೈದ್ಯ, ಶ್ರೀನಿವಾಸ ನಾಯಕ, ಶ್ರೀಧರ ಶೆಟ್ಟಿ, ಗಣೇಶ ಪೈ, ರಾಘು ಗೌಡ, ಚಂದ್ರಕಾಂತ ತೊರೆಗಜನಿ, ಮಂಜು ನಾಯ್ಕ, ರಾಘವೇಂದ್ರ ಆಚಾರಿ, ಮಂಜು ಮುಕ್ರಿ, ರತ್ನಾಕರ ಶೇಟ, ರಾಮು ಆಗೇರ, ರಾಜೇಶ ಚೋಡನಕರ್, ಸುರೇಶ ಗೌಡ, ರಾಘು ಶೇಟ, ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ವಿಶ್ವ ತಂಬಾಕು ವಿರೋಧಿ ದಿನಾಚರಣೆ