ಭಟ್ಕಳ : ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬುಧವಾರ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಡಗುಂಜಿ ಗಣಪತಿ ದೇವರಿಗೆ ಮುಂಜಾನೆ ಪೂಜೆ ಸಲ್ಲಿಸಿದರು. ನಂತರ ಬೀನಾ ವೈದ್ಯ ಇಂಟರನ್ಯಾಷನಲ್ ಶಾಲೆಯಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಂತೋಷದಿದ ಜೀವನ ನಡೆಸಬೇಕು. ಸರ್ಕಾರದ ಎಲ್ಲಾ ಸೌಲಭ್ಯಗಳು ತಲುಪಬೇಕು. ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳವಲ್ಲಿ ನಮ್ಮ ಸಂಸ್ಥೆ ಸದಾ ಸಹಕಾರ ನೀಡುತ್ತದೆ. ವಿಶೇಷವಾಗಿ ನನ್ನ ಕ್ಷೇತ್ರದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬೇರೆ ಜಿಲ್ಲೆ, ರಾಜ್ಯಕ್ಕೆ ಅಲೆಯುವ ಸಂದರ್ಭ ತಪ್ಪಿಸಲೆಂದು ಈ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿದೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶವೂ ಇದರಲ್ಲಿ ಅಡಗಿದೆ. ಕೆಜಿಯಿಂದ ಪಿಜಿವರೆಗೆ ಮಾತ್ರವಲ್ಲದೆ ಎಲ್ಲಾ ವೃತ್ತಿಪರ ಕೋರ್ಸಗಳನ್ನು ಇಲ್ಲಿ ಆರಂಭಿಸಲಾಗುವದು ಎಂದರು.
ಇದನ್ನೂ ಓದಿ : ಜೂನ್ ೫ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಶಾಲೆಯ ಲೈಬ್ರರಿಗೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಆಗುವ ಪುಸ್ತಕಗಳನ್ನು ನೀಡಿದರು. ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು ನೀರುಣಿಸಿದರು. ಈ ಸಂದರ್ಭದಲ್ಲಿ ಪತ್ನಿ ಪುಷ್ಪಲತಾ ವೈದ್ಯ, ಪುತ್ರಿ ಬೀನಾ ವೈದ್ಯ, ಶಾಲೆಯ ಪ್ರಾಂಶುಪಾಲ ಮಾಧವ ಪೂಜಾರಿ, ನಯೀಮ್ ಗೋರಿ, ಕೃಷ್ಣಮೂರ್ತಿ ಶೆಟ್ಟಿ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಇದನ್ನೂ ಓದಿ : ವೃಕ್ಷಲಕ್ಷ ಆಂದೋಲನ ಆಶ್ರಯದಲ್ಲಿ ರಾಜ್ಯ ಸಮ್ಮೇಳನ ಜೂ.೨೩ರಂದು
ಮನೆಯಲ್ಲೂ ಹುಟ್ಟುಹಬ್ಬ ಆಚರಣೆ
ಸಚಿವರು ತಮ್ಮ ಮನೆಯಲ್ಲಿ ಅಭಿಮಾನಿಗಳು ಏರ್ಪಡಿಸಿದ ಹುಟ್ಟು ಹಬ್ಬದ ಸಂಬ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾನು ಶಾಸಕನಾಗುತ್ತೇನೆ ಎಂದು ಯಾವಾಗಲೂ ಯೋಚಿಸಿರಲಿಲ್ಲ. ಅಚಾನಕ್ಕಾಗಿ ಈ ಅದೃಷ್ಟ ಒಲಿದು ಬಂದಿತ್ತು. ಶಾಸಕನಾಗಿ, ಈಗ ಮಂತ್ರಿಯೂ ಆಗಿದ್ದೇನೆ. ನಿಮ್ಮ ಪ್ರೀತಿ, ಅಭಿಮಾನಗಳಿಗೆ ನಾನು ಚಿರೃಣಿಯಾಗಿದ್ದೇನೆ. ಎಂದೆಂದೂ ನಿಮ್ಮವನಾಗಿ ಇರುತ್ತೇನೆ. ಕ್ಷೇತ್ರದ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ಇರುತ್ತೇನೆ. ತಾನು ಶಾಸಕ, ಮಂತ್ರಿ ಇವೆಲ್ಲದರ ಹೊರತಾಗಿ ನಿಮ್ಮವ. ಸದಾ ಬಡವರ, ಶೋಷಿತರ ಧ್ವನಿಯಾಗಿ ನಿಮ್ಮಲ್ಲೇ ಒಬ್ಬನಾಗಿ ಇರುತ್ತೇನೆ ಎಂದು ಮಂಕಾಳ ವೈದ್ಯ ಹೇಳಿದರು.
ಜನತಾ ಸೊಸೈಟಿಯ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ಪರಮೇಶ್ವರ ಕೋಣೆಮನೆ, ವೆಂಕಟ್ರಮಣ ನಾಯ್ಕ, ನಾಗಪ್ಪ ನಾಯ್ಕ, ಅಲ್ಬರ್ಟ ಡಿಕೋಸ್ತಾ, ರಾಮಚಂದ್ರ ಕಿಣಿ, ತಿಮ್ಮಪ್ಪ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಪ್ರಮುಖರಾದ ಗೋಪಾಲ ನಾಯ್ಕ, ಮಂಜಪ್ಪ ನಾಯ್ಕ, ವಿಠ್ಠಲ ನಾಯ್ಕ, ರಾಜು ನಾಯ್ಕ, ಭಾಸ್ಕರ ನಾಯ್ಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.