ಭಟ್ಕಳ: ಶನಿವಾರ ದಿನವಿಡೀ ಸುರಿದ ಧಾರಾಕಾರ ಮಳೆಗೆ ಭಟ್ಕಳದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಭಟ್ಕಳ ಶಂಸುದ್ದೀನ ಸರ್ಕಲ್ ರಾಷ್ಟ್ರೀಯ ಹೆದ್ದಾರಿ ಮಳೆ ನೀರು ನಿಂತು ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿದೆ. ಭಾನುವಾರವೂ ಮಳೆ ಮುಂದುವರಿದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶನಿವಾರ ಬೆಳಿಗ್ಗೆಯಿಂದ ರವಿವಾರ ಬೆಳಿಗ್ಗೆ ತನಕ ತಾಲೂಕಿನಲ್ಲಿ 108.8 ಮಿ.ಮೀ. ಮಳೆಯಾಗಿದೆ.
ಶನಿವಾರ ಧಾರಾಕಾರ ಮಳೆಗೆ ಪಟ್ಟಣದ ಸಂಶುದ್ದೀನ್ ವೃತ್ತ ಹಾಗೂ ರಂಗಿನಕಟ್ಟೆ ಬಳಿ ಚತುಷ್ಪಥ ಹೆದ್ದಾರಿ ಮೇಲೆ ನೀರು ನಿಂತು, ಕೆಲ ಕಾಲ ನದಿಯಂತೆ ಮಾರ್ಪಾಡಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಅನೇಕರು ಕೆಲಕಾಲ ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿ ಮಳೆ ಕಡಿಮೆಯಾಗುವುದನ್ನೇ ಕಾಯುತ್ತಿದ್ದ ದೃಶ್ಯ ಕಂಡುಬಂತು.
ಇದನ್ನೂ ಓದಿ : ಕನ್ನಡ ಕೌಸ್ತುಭ ಪ್ರಶಸ್ತಿಗೆ ಮಹಾಲಕ್ಷ್ಮಿ ಗೋಪಾಲ ಶೆಟ್ಟಿ ಆಯ್ಕೆ
ಇತ್ತ ಬೆಳಕೆ ಎಂ.ಎಂ.ರೆಸಾರ್ಟ್ ಸಮೀಪ ವ್ಯಕ್ತಿಯೋರ್ವರು ತಮ್ಮ ವೈಯಕ್ತಿಕ ಜಾಗದಲ್ಲಿ ಮಣ್ಣು ಹಾಕಿಕೊಂಡಿರುವುದರಿಂದ ಆ ಭಾಗದ ರಸ್ತೆಯಲ್ಲಿ ಮಳೆ ನೀರು ನಿಂತು ಸ್ಥಳೀಯರಿಗೆ ತೊಂದರೆ ಉಂಟಾಗಿರುವ ಆಕ್ರೋಶ ಹೊರಬಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ ನಾಯ್ಕಡ ಅವರು ಭೇಟಿ ನೀಡಿದರು. ಆ ಭಾಗದ ನೋಡಲ್ ಅಧಿಕಾರಿ ಸಂಶುದ್ದೀನ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ತೆರಳಿ ಜೆಸಿಬಿ ಸಹಾಯದಿಂದ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿಕೊಟ್ಟರು. ಈ ವೇಳೆ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದರು.
ಇದನ್ನೂ ಓದಿ : ಮನೆಯ ಗೋಡೆ ಮಳೆಗೆ ತೊಯ್ದು ಕುಸಿತ