ಭಟ್ಕಳ: ಶಿಕ್ಷಣ ಪ್ರೇಮಿಗಳು ಹಾಗೂ ಭಟ್ಕಳ ತಾಲೂಕು ನಾಮಧಾರಿ ಸಮಾಜದ ವತಿಯಿಂದ ೨೦೨೩-೨೪ ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಹಂತದಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟ್ರಮಣ ಸಭಾಭವನ ಆಸರಕೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಭಟ್ಕಳ ನಾಮಧಾರಿ ಸಮಾಜದ ಹಿರಿಯ ಮುಖಂಡ, ನಿವೃತ್ತ ಶಿಕ್ಷಕ ಡಿ.ಬಿ. ನಾಯ್ಕ, ಈಗಿನ ಕಾಲದ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಯಲು ಸಹಾಯ ಸಹಕಾರ ಹಾಗೂ ಅವಕಾಶ ಹೆಚ್ಚಿದೆ. ಆದರೆ ನಮ್ಮ ಕಾಲದಲ್ಲಿ ಕಲಿಯಲು ಆಸಕ್ತಿ ಇದ್ದರು ಸಹ ಕಲಿಯಲು ಅವಕಾಶ ಇಲ್ಲವಾಗಿತ್ತು. ಆದರೆ ಈಗ ವಿದ್ಯಾರ್ಥಿಗಳು ಒಂದು ಸೂಕ್ತ ಗುರಿ ಇಟ್ಟುಕೊಂಡಿದ್ದಲ್ಲಿ ಈಗಿನ ಕಾಲದಲ್ಲಿ ಅವರನ್ನು ಪ್ರೋತ್ಸಾಹಿಸಲು ಸಾಕಷ್ಟು ದಾನಿಗಳು ಮುಂದೆ ಬರುತ್ತಾರೆ. ಈ ಎಲ್ಲಾ ಅವಕಾಶವನ್ನು ಉಪಯೋಗಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ಇದನ್ನೂ ಓದಿ : ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ
ಭಟ್ಕಳ ನಾಮಧಾರಿ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಣ ಬಹು ಮುಖ್ಯ. ತಮ್ಮ ಜೀವನದಲ್ಲಿ ಒಂದು ಹಂತಕ್ಕೆ ತಲುಪಿದ ನಂತರ ನಮ್ಮ ಸಮಾಜದ ಏಳಿಗೆಗಾಗಿ ನಮ್ಮ ಕೊಡುಗೆಯೂ ಬಹು ಮುಖ್ಯವಾಗಿದೆ. ಇದರ ಜೊತೆಯಲ್ಲಿ ಒಂದು ಸಮುದಾಯದ ಏಳಿಗೆಗೂ ವಿದ್ಯಾವಂತರು ತಮ್ಮ ದುಡಿಮೆಯಲ್ಲಿ ಅಲ್ಪ ಮೊತ್ತವನ್ನು ಸಂಗ್ರಹಿಸಿಟ್ಟು ಶೈಕ್ಷಣಿಕ ನಿಧಿಗಾಗಿ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಆರ್ಥಿಕ ಸುಧಾರಣೆ ಹೊಂದಿರುವವರು ಸಮಾಜಕ್ಕೆ ಧನಸಹಾಯ ಮಾಡುವ ಇಚ್ಛೆ ತೀರ ಕಡಿಮೆ ಆಗಿರುತ್ತದೆ. ಆದರೆ ಆರ್ಥಿಕ ಸುಧಾರಣೆ ಹೊಂದಿರದೆ ಇರುವವರಿಗೆ ನಮ್ಮ ಸಮಾಜಕ್ಕೆ ಧನಸಹಾಯ ಮಾಡುವ ಇಚ್ಛೆ ಹೊಂದಿರುತ್ತಾರೆ. ನಾನು ಕೂಡ ಕಷ್ಟದಲ್ಲಿಯೇ ಜೀವನ ಕಟ್ಟಿಕೊಂಡು ಬಂದವನು. ನನ್ನ ಸಮಾಜ ನನ್ನನ್ನು ಗುರುತಿಸಿ ಒಳ್ಳೆಯ ಸ್ಥಾನ ನೀಡಿದೆ. ಇದಕ್ಕಾಗಿ ನಾನು ನನ್ನ ಸಮಾಜಕ್ಕೆ ಏನಾದರೂ ಒಂದು ಶಾಶ್ವತ ಕೊಡುಗೆ ನೀಡುತ್ತೇನೆ. ಅದರೊಂದಿಗೆ ಬಡವರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.
ಇದನ್ನೂ ಓದಿ : ಜೂನ್ ೯ರಂದು ತೀರ್ಥಹಳ್ಳಿ ಎಪಿಎಂಸಿಯಲ್ಲಿ ಅಡಿಕೆ ಧಾರಣೆ
ವಿದ್ಯಾರ್ಥಿಗಳಾದ ನೀವು ಯಾವುದೇ ಉನ್ನತ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಹೋದರೆ ತಂದೆ ತಾಯಿಗಳನ್ನು ಎಂದಿಗೂ ಮರೆಯಬೇಡಿ. ತಂದೆ ತಾಯಿಗಳನ್ನು ಎಷ್ಟು ಪ್ರೀತಿಸಿ ಗೌರವಿಸುತ್ತೀರೋ ಅಷ್ಟು ಏಳಿಗೆ ಹೊಂದುತ್ತಿರಾ ಎಂದು ಹೇಳಿದರು.
ಇದನ್ನೂ ಓದಿ : ಕನ್ನಡ ಕೌಸ್ತುಭ ಪ್ರಶಸ್ತಿಗೆ ಮಹಾಲಕ್ಷ್ಮಿ ಗೋಪಾಲ ಶೆಟ್ಟಿ ಆಯ್ಕೆ
ನಿವೃತ್ತ ನ್ಯಾಯಾಧೀಶ ರವಿ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪ್ರತಿಭಾಪುರಸ್ಕಾರ ಎನ್ನುವುದು ಅವರ ಏಳಿಗೆಗೆ ಸಹಕಾರಿಯಾಗಲಿದೆ. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಸಮಯದಲ್ಲಿ ವಿದ್ಯಾರ್ಥಿಗಳ ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಮನಸ್ಸನ್ನು ವಿದ್ಯಾಭ್ಯಾಸಕ್ಕಾಗಿ ಕೇಂದ್ರೀಕರಿಸಿ ಉತ್ತಮ ಅಂಕ ಪಡೆದು ತೇರ್ಗಡೆಯಾಗುವುದು ಒಂದು ಹಂತವಾಗಿದೆ. ಆದರೆ ಜೀವನ ಅಲ್ಲಿಗೆ ಮುಗಿಯುವುದಿಲ್ಲ. ಬದಲಿಗೆ ನಿಮ್ಮ ಜೀವನ ಅಲ್ಲಿಂದ ಪ್ರಾರಂಭವಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಶಿವಾನಂದ ನಾಯ್ಕ ಮಾತನಾಡಿದರು.
ಇದನ್ನೂ ಓದಿ : ಮನೆಯ ಗೋಡೆ ಮಳೆಗೆ ತೊಯ್ದು ಕುಸಿತ
ತಂದೆ ಇಲ್ಲದ 18 ಬಡ ವಿದ್ಯಾರ್ಥಿಗಳಿಗೆ 10 ಸಾವಿರ ಹಾಗೂ 114 ವಿದ್ಯಾರ್ಥಿಗಳಿಗೆ 1 ಸಾವಿರದಂತೆ ಒಟ್ಟು 132 ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಯಿತು. ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ನೀಡಲಾಯಿತು. ಶೈಕ್ಷಣಿಕ ನಿಧಿಯಿಂದ ಸಂಗ್ರಹವಾದ ಒಟ್ಟು ೩.೦೪ ಲಕ್ಷ ರೂ. ಹಣವನ್ನು ಪ್ರತಿಭಾಪುರಸ್ಕಾರಕ್ಕೆ ಉಪಯೋಗಿಸಿಕೊಳ್ಳಲಾಯಿತು.
ಶೈಕ್ಷಣಿಕ ನಿಧಿ ಸಂಗ್ರಹಣೆಯಾಗಿದ್ದು ಹೇಗೆ?
ಭಟ್ಕಳ ತಾಲೂಕಿನ ಕೆಲ ಶಿಕ್ಷಣ ಪ್ರೇಮಿಗಳು ಹಾಗೂ ಭಟ್ಕಳ ನಾಮಧಾರಿ ಸಮಾಜವು ಭಟ್ಕಳ ಹಾಗೂ ಶಿರಾಲಿ ನಾಮಧಾರಿ ಕೂಟದಲ್ಲಿ ಬರುವ ತಮ್ಮ ಸಮಾಜದ ಮನೆಗಳಿಗೆ ಸುಮಾರು ೪೫೦ಕ್ಕೂ ಅಧಿಕ ಶೈಕ್ಷಣಿಕ ಹುಂಡಿ ತಲುಪಿಸಲಾಗಿತ್ತು. ಅದರಲ್ಲಿ ೩೫೦ ಹುಂಡಿಗಳಿಂದ ಸಂಗ್ರಹವಾದ ೩.೦೪ ಲಕ್ಷ ರೂ. ಹಣವನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿ ಪುರಸ್ಕರಿಸಲಾಯಿತು. ಶಿಕ್ಷಣ ಪ್ರೇಮಿಗಳ ಹಾಗೂ ಭಟ್ಕಳ ನಾಮಧಾರಿ ಸಮಾಜದ ಈ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.