ಭಟ್ಕಳ : ರಾಮಭಕ್ತರಿಗೆ ಸಂತಸದ ಸುದ್ದಿ. ಅದೇನು ಅಂತೀರಾ? ಈ ವರದಿ ನೋಡಿ….
ಈಗಾಗಲೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಜೀವನದಲ್ಲಿ ಒಮ್ಮೆಯಾದರೂ ಶ್ರೀರಾಮನ ದರ್ಶನ ಪಡೆಯಬೇಕು ಎನ್ನುವಂತಹ ಹಂಬಲ ಪ್ರತಿಯೊಬ್ಬ ರಾಮಭಕ್ತರಿಗೆ ಇದೆ. ಆದರೆ ವಯೋವೃದ್ಧರಿಗೆ ಹಾಗೂ ಹಿರಿಯ ಜೀವಿಗಳಿಗೆ ಇದು ಕಷ್ಟ ಸಾಧ್ಯವಾಗಬಹುದು. ಅಂಥವರನ್ನು ಗಮನದಲ್ಲಿ ಇರಿಸಿಕೊಂಡು ಶ್ರೀರಾಮ ಮಂದಿರ ಮಾದರಿ ಪ್ರದರ್ಶನ ಆಯೋಜಿಸಲಾಗುತ್ತಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶ್ರೀರಾಮ ಭಕ್ತರಾದ ತುಮಕೂರು ಜಿಲ್ಲೆಯ ಬಿದಿರೆ ಗ್ರಾಮದವರಾದ ವೃತ್ತಿಯಲ್ಲಿ ಶಿಕ್ಷಕರಾದ ವಿನಯರಾಮ್ ಈ ಮಹತ್ಕಾರ್ಯ ಮಾಡುತ್ತಿದ್ದಾರೆ. ಸನಾತನ ಧರ್ಮದ ಜಾಗೃತಿಗಾಗಿ ಹಾಗೂ ಪ್ರಭು ಶ್ರೀ ರಾಮನ ಚಿಂತನೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಮುಂದಡಿ ಇಟ್ಟಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಅಯೋಧ್ಯೆ ರಾಮಮಂದಿರದ ಮಾದರಿಯನ್ನು ರಾಜ್ಯಾದ್ಯಂತ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ೧೦೮ ಕಡೆಗಳಲ್ಲಿ ಈ ಮಂದಿರದ ಮಾದರಿ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ : ಪೊಲೀಸ್ ವಸತಿಗೃಹ ಮೂಲಕ ತೆರಳುವ ರಸ್ತೆ ಬಂದ್; ಯಥಾಸ್ಥಿತಿಗೆ ಆದೇಶ
ಭಟ್ಕಳದಲ್ಲೂ ಪ್ರದರ್ಶನ
ಭಟ್ಕಳದ ರಥಬೀದಿಯಲ್ಲಿರುವ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಮಾದರಿಯ ವಿಶೇಷ ಪ್ರದರ್ಶನ ಜೂನ್ ೧೫ರಿಂದ ೨೨ರವರೆಗೆ ಹಮ್ಮಿಕೊಂಡಿದ್ದಾರೆ. ಭಟ್ಕಳದ ಸಮಸ್ತ ರಾಮ ಭಕ್ತರು ಶ್ರೀ ರಾಮ ಮಂದಿರದ ಪ್ರತಿಕೃತಿಯ ದರ್ಶನ ಪಡೆದು ಕೃತಾರ್ಥರಾಗುವಂತೆ ವಿನಂತಿಸಲಾಗಿದೆ.
ಇದನ್ನೂ ಓದಿ : ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ನಾನಾ ಚರ್ಚೆ