ಭಟ್ಕಳ : ಭಟ್ಕಳ ನ್ಯಾಯಾಲಯದ ನವೀನ ಕಟ್ಟಡ ನಿರ್ಮಾಣಕ್ಕೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ೧೨ ಕೋಟಿ ರೂಪಾಯಿಗಳ ಅನುದಾನಕ್ಕೆ ಒಪ್ಪಿಗೆ ದೊರಕಿದೆ. ಇದಕ್ಕೆ ಕಾರಣೀಕರ್ತರಾದ ಉಸ್ತುವಾರಿ ಸಚಿವ, ಭಟ್ಕಳ ಶಾಸಕ ಮಂಕಾಳ ವೈದ್ಯರನ್ನು ಅವರ ಗೃಹ ಕಚೇರಿಯಲ್ಲಿ ಭಟ್ಕಳ ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಹಿರಿಯ ವಕೀಲರಾದ ರವೀಂದ್ರ ಶ್ರೇಷ್ಟಿ, ಎಮ್. ಎಲ್. ನಾಯ್ಕ, ಸಂಘದ ಅಧ್ಯಕ್ಷ ಗಣೇಶ ದೇವಾಡಿಗ ಮತ್ತಿತರರು ಭಟ್ಕಳ ವಕೀಲರ ಪರವಾಗಿ ಸಚಿವರಿಗೆ ಕೃತಜ್ಞತೆ ಅರ್ಪಿಸಿದರು.

ಇದನ್ನೂ ಓದಿ : ಸಚಿನ್ ಮಹಾಲೆ ಅವರಿಗೆ ಬಿಜೆಪಿಯಿಂದ ಶ್ರದ್ಧಾಂಜಲಿ

ಭಟ್ಕಳ ನ್ಯಾಯಾಲಯದ ವಸತಿ ಸಂಕಿರ್ಣಕ್ಕಾಗಿ ಇನ್ನೂ ಹೆಚ್ಚುವರಿ ೨.೫ ಕೋಟಿ ರೂಪಾಯಿಗಳನ್ನು ಮಂಜೂರಿ ಮಾಡಿಸುವುದಾಗಿ ಹಾಗೂ ನ್ಯಾಯಾಲಯದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಸಹಕಾರ ನೀಡುವುದಾಗಿ ಸಚಿವರು ಈ ಸಮಯದಲ್ಲಿ ಭರವಸೆ ನೀಡಿದರು.

ಇದನ್ನೂ ಓದಿ : ಪ್ರಶಂಸನಾ ಪತ್ರ ಪಡೆದ ಭಟ್ಕಳ ಶಹರ ಠಾಣೆಯ ದೀಪಕ ನಾಯ್ಕ