ಭಟ್ಕಳ : ಚಲಿಸುತ್ತಿದ್ದ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಶಿರಾಲಿ ಚಿತ್ರಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮೃತ ಬೈಕ್ ಸವಾರನನ್ನು ತಾಲೂಕಿನ ಅಳ್ವೆಕೋಡಿ ನಿವಾಸಿ ರಾಮಚಂದ್ರ ನಾಗೇಶ ಮೊಗೇರ (42) ಎಂದು ಗುರುತಿಸಲಾಗಿದೆ. ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಕಾರು ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿರುವುದಾಗಿ ಆರೋಪಿಸಲಾಗಿದೆ. ಶಿರಾಲಿ ಚಿತ್ರಾಪುರ ಕ್ರಾಸ್ ಹತ್ತಿರ ಬಂದಾಗ ಅದೇ ರಸ್ತೆಯಲ್ಲಿ ಮುಂದೆ ಚಲಿಸುತ್ತಿದ್ದ ಬೈಕಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನ ತಲೆಯ ಹಿಂಬಾಗದಲ್ಲಿ ಗಂಭೀರ ಗಾಯವಾಗಿದೆ. ಗಾಯಾಳು ರಾಮಚಂದ್ರ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ : ಕರಾವಳಿಗರಿಗೆ ಚಿರಪರಿಚಿತ ಎಂ ಬಿ ಭಾನುಪ್ರಕಾಶ
ಇನ್ನೊಂದು ಬೈಕಿಗೂ ಡಿಕ್ಕಿ :
ಅದೇ ವೇಳೆ ಕಾರನ್ನು ಮುಂದಕ್ಕೆ ಚಲಾಯಿಸಿ ಅವರ ಮುಂದೆ ಭಟ್ಕಳ ಕಡೆಗೆ ಹೋಗುತ್ತಿದ್ದ ರವಿಶಂಕರ್ ಜಟ್ಟಾ ನಾಯ್ಕ ಎನ್ನುವವರ ಬೈಕಿಗೂ ಡಿಕ್ಕಿ ಹೊಡೆದಿದೆ. ಸವಾರ ರವಿಶಂಕರ್ ಜಟ್ಟಾ ನಾಯ್ಕ, ಪತ್ನಿ ರೇವತಿ ಹಾಗೂ ಪ್ರತಿಕ್ಷಾ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಪಡೆಸಿದ ಕಾರನ್ನು ಚಾಲಕ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.