ಭಟ್ಕಳ: ತಾಲೂಕಿನ ಅಳ್ವೆಕೋಡಿ ಕಿರುಬಂದರು (ಜಟ್ಟಿ) ಮೇಲ್ದರ್ಜೆಗೆ ಏರಿಸಿ ಬಂದರನ್ನಾಗಿ ಮಾಡುವ ಪ್ರಸ್ತಾವನೆ ಸಿದ್ಧವಾಗಿದೆ. ಶೀಘ್ರದಲ್ಲಿ ಇಲ್ಲಿನ ಬಂದರಿಗೆ ಹಾಗೂ ಮೀನುಗಾರರಿಗೆ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸಲಾಗುವುದು ಎಂದು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ತೆಂಗಿನಗುಂಡಿಯ ಬಂದರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಳ್ವೆಕೋಡಿ ಕಿರುಬಂದರು ವಿಸ್ತರಣೆಗೆ 25 ಕೋಟಿ ರೂ. ಅನುದಾನ ಮಂಜೂರಿ ಮಾಡಿಸಲು ಪ್ರಸ್ತಾವನೆ ಈಗಾಗಲೆ ಸಿದ್ದವಾಗಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆದು ಅದನ್ನು ಬಿಡುಗಡೆ ಮಾಡಲಾಗುವುದು. ಈಗಾಗಲೇ ೭೨೦ ಮೀ. ಅಲೆ ತಡೆಗೋಡೆ ಇದೆ. ಅದನ್ನು ಇನ್ನೂ ೧೦೦ ಮೀಟರ್ ವಿಸ್ತರಿಸಲಾಗುವುದು. ಈ ಕುರಿತು ಅಧ್ಯಯನ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಕೋಕ್ತಿ ಕೆರೆ ರಕ್ತಮಯ; ಸಾರ್ವಜನಿಕರ ಆಕ್ರೋಶ

ಶ್ರೀ ದುರ್ಗಾ ಮೊಗೇರ ಅಸೋಸಿಯೇಶನ್ ಅಧ್ಯಕ್ಷ ಯಾದವ ಮೊಗೇರ, ತೆಂಗಿನಗುಂಡಿ ಪರ್ಸಿಯನ್ ಬೋಟ್ ಯೂನಿಯನ್ ಅಧ್ಯಕ್ಷ ಜಟಕಾ ಕಾಯ್ಕಿಣಿ, ಅಳ್ವೆಕೋಡಿ ಫಿಶ್‌ರಿಸ್ ಸೊಸೈಟಿಯ ಪದಾಧಿಕಾರಿಗಳು, ಮೀನುಗಾರಿಕೆ ಇಲಾಖೆಯ ಅಧಿಕಾರಿ ರವಿ ಮುನಿಯಪ್ಪ, ಇತರರು ಇದ್ದರು.