ಕುಮಟಾ: ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅನಾಹುತ ನಡೆದ ಘಟನೆ ಶನಿವಾರ ಮಧ್ಯಾಹ್ನ ೧.೩೦ರ ಸುಮಾರಿಗೆ ನಡೆದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಪಟ್ಟಣದ ಕೊಪ್ಪಳಕರ ವಾಡಿಯಲ್ಲಿ ಶಾಸಕ ದಿನಕರ ಶೆಟ್ಟಿ ಅವರ ಮನೆ ಇದೆ. ಈ ಮನೆ ಇರುವ ಆವರಣದಲ್ಲಿ ಶಾಸಕರಿಗೆ ಸೇರಿದ ಕಟ್ಟಿಗೆ ಮಿಲ್ ಹಾಗೂ ಸಹೋದರರ ಮನೆಗಳು ಇವೆ. ಈ ರೀತಿ ಇರುವ ಮನೆಯಲ್ಲಿ ಶಾಸಕರ ಸಹೋದರ ಮಧುಕರ ಶೆಟ್ಟಿ ಅವರ ಮನೆಯಲ್ಲಿ ಈ ಬೆಂಕಿ ಅನಾಹುತದ ಅವಘಡ ಸಂಭವಿಸಿದೆ.

ಇದನ್ನೂ ಓದಿ : ಡಿಜಿಟಲ್ ಚುನಾವಣೆಗೆ ನಾಂದಿ ಹಾಡಿದ ವಿದ್ಯಾಂಜಲಿ

ಮಧುಕರ ಶೆಟ್ಟಿ ಅವರು ಕಟ್ಟಿಗೆ ಮಿಲ್ ನೋಡಿಕೊಳ್ಳುತ್ತಿದ್ದಾರೆ. ಈ ಅವಘಡ ಸಂಭವಿಸುವ ಸಂದರ್ಭದಲ್ಲಿ ಅವರು ಮಿಲ್‌ನಲ್ಲಿ ಇದ್ದರು. ಇವರ ಪತ್ನಿ ಆಗಷ್ಟೇ ಪೇಟೆಯಲ್ಲಿ ಖರೀದಿ ಮುಗಿಸಿಕೊಂಡು ಮನೆಗೆ ಬಂದವರು ಬಾಗಿಲು ತೆಗೆದಾಗ ಒಮ್ಮೆಲೆ ಬೆಂಕಿ ಜ್ವಾಲೆ ಮನೆಯ ಅಡುಗೆ ಮನೆಯಿಂದ ಹೊರಬಂದು ಮನೆಯ ಒಳಗೆಲ್ಲ ಆವರಿಸಿಕೊಂಡಿತು.

ಇದನ್ನೂ ಓದಿ : ‘ಬಿಜ್ ಡೊಕ್-೨೦೨೪’ ವಿನೂತನ ಪ್ರೀಮಿಯರ್ ಪ್ರದರ್ಶನ ಯಶಸ್ವಿ

ಇದರಿಂದ ಮನೆಯಲ್ಲಿದ್ದ ಟಿವಿ ಸೇರಿದಂತೆ ಬಹುತೇಕ ವಸ್ತುಗಳು ಬೆಂಕಿಯಿಂದ ಸುಟ್ಟು ಕರಕಲಾದವು. ಮನೆಯೊಡತಿಗೆ ಸಣ್ಣ ಪುಟ್ಟ ಸುಟ್ಟಗಾಯಗಳಾಗಿವೆ. ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಅವರು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದಾರೆ. ಶಾಸಕರ ಸಹೋದರನ ಮನೆಯಲ್ಲಿ ಬೆಂಕಿ ಅನಾಹುತವಾಗಿರುವುದನ್ನು ತಿಳಿದ ಸ್ಥಳೀಯ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ಬೆಂಕಿ ಆರಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು.

ಇದನ್ನೂ ಓದಿ : ಭಟ್ಕಳದ ಯುವಕನ ಮನೆಗೆ ನೋಟೀಸ್ ಅಂಟಿಸಿದ ಮಹಾರಾಷ್ಟ್ರ ಎಟಿಎಸ್