ಹೊನ್ನಾವರ: ತಾಲೂಕಿನ ಕರ್ಕಿ ನಾಕಾ ಬಳಿ ಮಿಥೇನ್ ಸಾಗಿಸುವ ಖಾಲಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಪಕ್ಕಕ್ಕೆ ಇಳಿದ ಘಟನೆ ಇಂದು ಸಂಭವಿಸಿದೆ.
ಟ್ಯಾಂಕರ್ ಮಂಗಳೂರು ಕಡೆಯಿಂದ ಕಾರವಾರದ ಕಡೆಗೆ ಹೋಗುತ್ತಿರುವಾಗ ಘಟನೆ ನಡೆದಿದ್ದು, ಅದೃಷ್ಟವಶಾತ್ ಸನಿಹದಲ್ಲೇ ಇರುವ ವಿದ್ಯುತ್ ಟ್ರಾನ್ಸಫಾರ್ಮರ್ ಗೆ ಟ್ಯಾಂಕರ್ ಡಿಕ್ಕಿಯಾಗದೆ ಅವಘಡ ತಪ್ಪಿದೆ.
ಇತ್ತೀಚಿನ ದಿನದಲ್ಲಿ ಟ್ಯಾಂಕರ್ ಪಲ್ಟಿಯಾಗುವ ಪ್ರಕರಣ ಆತಂಕಕಾರಿಯಾಗಿದ್ದು, ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಇಂತಹ ಘಟನೆ ಮರುಕಳಿಸುತ್ತಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.