ಭಟ್ಕಳ: ಮುರುಡೇಶ್ವರದ ಆರ್ ಎನ್ ಶೆಟ್ಟಿ ಪಪೂ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ.ಬಿ ಮಡಿವಾಳ ಮಾತನಾಡಿದರು. ವಿದ್ಯಾರ್ಥಿಗಳ ಪ್ರತಿಯೊಂದು ಸಾಧನೆಗೂ ಆಸಕ್ತಿ ಹಾಗೂ ಸ್ವಪ್ರಯತ್ನ ಬಹಳ ಮುಖ್ಯ ಎಂದರು.
ಇದನ್ನೂ ಓದಿ : ಹಿರಿಯ ಸಮಾಜ ಸೇವಕ ಎಸ್.ಎಸ್. ಕಾಮತರಿಗೆ ಗೌರವ ಸನ್ಮಾನ
ಆರ್ ಎನ್ ಶೆಟ್ಟಿ ಪಪೂ ಕಾಲೇಜಿನ ಪ್ರಾಚಾರ್ಯೆ ಅಶ್ವಿನಿ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯಸ್ಥೆ ಮಾಲತಿ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಲ್ಲಿರುವ ವಿವಿಧ ಪ್ರತಿಭೆಯ ಅನಾವರಣ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ : ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ
ಶಿಭಾನಿ ಜೈವಂತ ಸ್ವಾಗತಿಸಿದರು. ಅನನ್ಯ ವಂದಿಸಿದರು, ನಾಗವೇಣಿ ಮತ್ತು ರಿಯೋನ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ : ಸ್ಪೋರ್ಟ್ಸ್ ಕರಾಟೆ ರೆಫ್ರಿ ತರಬೇತಿ ಉದ್ಘಾಟನೆ