ಹೊನ್ನಾವರ: ಇಸ್ವತ್ತು ಮಾಡಿಕೊಡಲು ಲಂಚ ಸ್ವೀಕರಿಸುವಾಗ ಇಲ್ಲಿನ ಪಟ್ಟಣ ಪಂಚಾಯತ ಕಚೇರಿಗೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಇಸ್ವತ್ತು ಮಾಡಲು ಲಂಚ ಬೇಡಿಕೆ ಇಟ್ಟಿದ್ದ ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಹಾಗೂ ಪ.ಪಂ.ಸದಸ್ಯ ವಿಜಯ ಕಾಮತ ಆರೋಪಿತರು. ಈರ್ವರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಉದ್ಯಮನಗರದ ದಾಮೋದರ ಮಂಜುನಾಥ ನಾಯ್ಕ ಮತ್ತು ಕಲ್ಯಾಣಿ ಮಂಜುನಾಥ ನಾಯ್ಕ ಅವರಿಂದ ಇಸ್ವತ್ತು ಮಾಡಿಕೊಡಲು ೨ ಲಕ್ಷ ರೂ. ಆರಂಭದಲ್ಲಿ ಬೇಡಿಕೆ ಇಟ್ಟಿದ್ದರು. ನಂತರ ಸದಸ್ಯ ವಿಜಯ ಕಾಮತ ಮೂಲಕ ೬೦ ಸಾವಿರ ವ್ಯವಹಾರ ಕುದುರಿಸಿ ಲಂಚ ಸ್ವೀಕರಿಸುವಾಗ ಬಲೆ ಬಿದ್ದಿದ್ದಾರೆ.

ಇದನ್ನೂ ಓದಿ : ಪ್ರಯಾಣಿಕನ ಮೇಲೆ‌ ತಂಡದಿಂದ ಹಲ್ಲೆ; ಬಸ್ ತಡೆದು ಕುಟುಂಬಸ್ಥರಿಂದ ಆಕ್ರೋಶ