ಕುಮಟಾ : ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಹುಬ್ಬಳ್ಳಿಯ ಭೈರಿದೇವರಕೊಪ್ಪದ ರೇಣುಕಾನಗರ ಮೂಲದ ಸಿದ್ದಲಿಂಗಪ್ಪ ಮಹಾದೇವಪ್ಪ ಸಕ್ರಿಕಡ್ಡಿ(೩೬) ಮೃತ ದುರ್ದೈವಿ. ಇವರು ಟೈಲ್ಸ್ ಅಳವಡಿಕೆಯ ಕೆಲಸ ಮಾಡುತ್ತಿದ್ದರು. ಹಾಲಿ ಕುಮಟಾದ ಮೂರುಕಟ್ಟೆ ಬಳಿ‌ ವಾಸವಾಗಿದ್ದರು.

ಇದನ್ನೂ ಓದಿ : ಗೋರೆ ಗುಡ್ಡದ ಗೋಪಾಲಕೃಷ್ಣ ದೇಗುಲ ಕಳ್ಳತನ ಆರೋಪಿಗಳಿಬ್ಬರ ಬಂಧನ

ಇವರು ಜುಲೈ ೨ರಂದು ಬೆಳಿಗ್ಗೆ ೧೦.೩೦ ಗಂಟೆ ಸುಮಾರಿಗೆ ಕುಮಟಾ ಮಣಕಿ ಕ್ರಿಷ್ಟಲ್ ಬಾರ್ ಹತ್ತಿರ, ಎನ್.ಎಚ್- ೬೬ರ ಮೇಲೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದರು.‌ ಕುಮಟಾ ಕಡೆಯಿಂದ ದಿವಗಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ಮೋಟಾರ ಸೈಕಲ್ಲಿನ ನಿಯಂತ್ರಣ ಕಳೆದುಕೊಂಡಿದ್ದರು. ರಸ್ತೆಯ ಎಡಬದಿಯ ಸಿಮೆಂಟ್ ಬೋರ್ಡಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡಿದ್ದರು.

ಇದನ್ನೂ ಓದಿ : ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಸ್ತುಪ್ರದರ್ಶನ ಯಶಸ್ವಿ

ತಮ್ಮ ಎಡಬದಿಯ ಪಕ್ಕೆಲುಬಿಗೆ ಮತ್ತು ಬಲಕಾಲ ಹೆಬ್ಬರಳಿಗೆ ಗಂಭೀರ ಸ್ವರೂಪದ ಗಾಯ ಪಡಿಸಿಕೊಂಡಿದ್ದರು. ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಅವರು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಗ ಮೃತಪಟ್ಟಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಹಾಲಿ‌ ಮೂರುಕಟ್ಟೆ ನಿವಾಸಿಯಾಗಿರುವ ಧಾರವಾಡದ ಅಮ್ಮಿನಬಾವಿ ಕುರುಬರ ಓಣಿ ಮೂಲದ ಮಹಾಂತೇಶ ಭೀಮಪ್ಪ ಮಲ್ಲೂರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ ಡಾ.ಅರುಣಕುಮಾರಗೆ ಹೃದಯಸ್ಪರ್ಶಿ ಸ್ವಾಗತ