ಭಟ್ಕಳ: ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಸುವರ್ಣಾವಕಾಶ! ಭಟ್ಕಳದಲ್ಲಿ ಉದ್ಯೋಗಾವಕಾಶ ತೆರೆದಿದೆ.

ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಜಲಾವೃತ: ಫೇಸ್‌ಬುಕ್‌ ವಿಡಿಯೋಇನ್ಸ್ಟಾಗ್ರಾಂನಲ್ಲಿ ವಿಡಿಯೋ

ಭಟ್ಕಳದ ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ಕ್ಲರ್ಕ ಕಂ ಟೈಪಿಸ್ಟ್ ಹಾಗೂ ದಲಾಯಿತ ಹುದ್ದೆಗಳು ಖಾಲಿ ಇದೆ. ಗುತ್ತಿಗೆ ಹಾಗೂ ತಾತ್ಕಾಲಿಕ ನಾತೆಯಿಂದ ನೇಮಿಸಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಟ್ಕಳದಲ್ಲಿ ಉದ್ಯೋಗಾವಕಾಶ ತೆರೆದಿರುವುದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸುವವರು ಕ್ಲರ್ಕ ಕಂ ಟೈಪಿಸ್ಟ್ ಹುದ್ದೆಗೆ ಪಿ.ಯು.ಸಿ. ಹಾಗೂ ಜ್ಯೂನಿಯರ್ ಟೈಪಿಂಗ್ ಆಗಿರಬೇಕು, ದಲಾಯಿತ ಹುದ್ದೆಗೆ ಎಸ್.ಎಸ್.ಎಲ್.ಸಿ. ಅಥವಾ ಗರಿಷ್ಟ ಪಿ.ಯು. ಆದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜು.೨೫ ಆಗಿರುತ್ತದೆ. ಅರ್ಜಿಯನ್ನು ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ, ಮತ್ತು ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಸಿ. ನ್ಯಾಯಾಲಯ ಸಂಕೀರ್ಣ, ಭಟ್ಕಳ – ೫೮೧ ೩೨೦ ಈ ವಿಳಾಸಕ್ಕೆ ಸಲ್ಲಿಸುವಂತೆ ಕೋರಲಾಗಿದೆ.

ಇದನ್ನೂ ಓದಿ : ಭಾರಿ ಮಳೆಗೆ ಮಲೆನಾಡಿನ ಸಂಪರ್ಕ ಕಡಿತ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜು.೨೭ರಂದು ಬೆಳಗ್ಗೆ ೧೦ ಗಂಟೆಗೆ ಭಟ್ಕಳದ ತಾಲೂಕು ಕಾನೂನು ಸೇವಾ ಸಮಿತಿ ಕಚೇರಿಯಲ್ಲಿ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.