ಭಟ್ಕಳ: ಪಟ್ಟಣದ ಕ್ವಾಲಿಟಿ ಹೊಟೇಲ್ ತಿರುವಿನ ಬಳಿ ಕೊರಗರ ಕೇರಿಯಲ್ಲಿ ಎನ್ಎಚ್ಎಐ ಅವರ ಅವೈಜ್ಞಾನಿಕ ಕಾಮಗಾರಿಯಿಂದ ದೇವಸ್ಥಾನದ ಗರ್ಭಗುಡಿ ಕುಸಿದು ಬಿದ್ದಿದೆ. ಗರ್ಭಗುಡಿ ಕುಸಿದು ಒಂದು ದಿನ ಕಳೆದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಕೊರಗರಕೇರಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪಟ್ಟಣದ ಕೊರಗರಕೇರಿ ಕೋಟ ಜಟಕೇಶ್ವರ ದೇವಸ್ಥಾನದ ಗರ್ಭಗುಡಿ ಕುಸಿದಿಬಿದ್ದಿದೆ. ಪಕ್ಕದ ಸರ್ಕಾರಿ ಪ್ರಾಥಮಿಕ ಶಾಲೆಗೂ ಕುಸಿಯುವ ಭೀತಿ ಎದುರಾಗಿದೆ. ಆದರೆ, ಘಟನೆ ನಡೆದು ದಿನ ಕಳೆದರೂ ಅಧಿಕಾರಿಗಳು ಬಾರದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಾಫಿ ಮತ್ತು ರಬ್ಬರ್ ವಲಯದ ಸಾಮಾನ್ಯ ಪಾಲುದಾರರ ಸಭೆ
ರಾಷ್ಟ್ರೀಯ ಹೆದ್ದಾರಿ ೬೬ ವಿಸ್ತರಣೆಗಾಗಿ ಕೋಟ ಜಟಕೇಶ್ವರ ದೇವಸ್ಥಾನ ತೆರವು ಮಾಡಲಾಗಿತ್ತು. ಸಣ್ಣ ಕಟ್ಟಡದಲ್ಲಿ ದೇವರನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ದೇವರನ್ನು ಇಟ್ಟಿದ್ದ ಕೋಣೆ ಶುಕ್ರವಾರ ತಡರಾತ್ರಿ ಕುಸಿದಿದೆ. ಅಲ್ಲದೇ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಕುಸಿಯುವ ಭೀತಿಯಲ್ಲಿದೆ. ಇಲ್ಲಿ ಸುಮಾರು ೩೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಜೀವ ಭಯದಲ್ಲೇ ತರಗತಿಗೆ ಹಾಜರಾಗಬೇಕಿದೆ.
ಇದನ್ನೂ ಓದಿ : ಜುಲೈ ೬ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಈ ಕುರಿತು ಸ್ಥಳೀಯರು ಹಲವಾರು ಬಾರಿ ತಹಸೀಲ್ದಾರ, ಭಟ್ಕಳ ಉಪವಿಭಾಗಾಧಿಕಾರಿ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿಗಳ ಬಳಿಯೂ ದೂರಿದ್ದಾರೆ. ಆದರೆ ತಮ್ಮ ಅಳಲನ್ನು ಇಂದಿನವರೆಗೂ ಯಾರು ಕೇಳಿಲ್ಲ. ಪರಿಹಾರವನ್ನು ಒದಗಿಸಿಲ್ಲ. ದೇವಸ್ಥಾನ ಸ್ಥಳಾಂತರಕ್ಕೂ ಯಾರೂ ಮುಂದಾಗಿಲ್ಲ. ಪೌರಕಾರ್ಮಿಕ ವೃತ್ತಿಗೆ ನಾವು ಬೆಳಿಗ್ಗೆ ತೆರಳಿದರೆ ಸಂಜೆಗೆ ಮರಳಬೇಕಾಗುತ್ತದೆ. ಅಷ್ಟರಲ್ಲಿ ಇಲ್ಲಿ ಎನಾದರೂ ಅವಘಡ ನಡೆದರೆ ನಮ್ಮನ್ನು ಕೇಳುವವರು ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರೈಲಿನಲ್ಲಿ ಮಹಿಳೆಯ ಆಪಲ್ ಮೊಬೈಲ್ ಫೋನ್ ಕಳ್ಳತನ
ತಾಲೂಕಾಡಳಿತ ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಗಳೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೆದ್ದಾರಿಯಲ್ಲೆ ಕುಳಿತು ಪ್ರತಿಭಟನೆ ಅನಿವಾರ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.