ಭಟ್ಕಳ: ರಸ್ತೆ ದುರಸ್ತಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದರಿಂದ ಸಾರ್ವಜನಿಕರೇ ರಸ್ತೆ ದುರಸ್ತಿಗೆ ಮುಂದಾದ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಿಂದೂ ಕಾಲೋನಿಯ ಮುಝಮ್ಮಿಲ್ ಮಸ್ಜಿದ್ ರಸ್ತೆಯು ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ. ಪಂಚಾಯತ್ ಇದರಿಂದ ಸಾರ್ವಜನಿಕರೇ ರವಿವಾರ ರಸ್ತೆ ದುರಸ್ತಿಗೆ ಮುಂದಾದರು.
ಇದನ್ನೂ ಓದಿ : ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜೋಗ ಜಲಪಾತ
ಮಳೆಯಿಂದಾಗಿ ರಸ್ತೆ ಕೊಚ್ಚಿಕೊಂಡು ಹೋಗಿರುವ ಬಗ್ಗೆ ಹಲವು ಬಾರಿ ಜಾಲಿ ಪಟ್ಟಣ ಪಂಚಾಯತ್ ಸದಸ್ಯರು ಹಾಗು ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಇಡೀ ರಸ್ತೆಯೇ ಮಾಯವಾಗುವ ಅಪಾಯ ಇದೆ. ಹೀಗಾಗಿ ರವಿವಾರ ರಸ್ತೆಗೆ ಇಳಿದ ಜನರು ರಸ್ತೆಯ ನೀರನ್ನು ಹೊರಗೆ ಹರಿಸುವ ಪ್ರಯತ್ನ ನಡೆಸಿದರು.
ಇದನ್ನೂ ಓದಿ : ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಾರ್ಷಿಕೋತ್ಸವ