ಭಟ್ಕಳ: ಭಟ್ಕಳ ಸರ್ಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿರುವ ಮಹಿಳೆಯೊರ್ವರ ಹೊಟ್ಟೆಯಲ್ಲಿರುವ ಸುಮಾರು 5 ಕೆಜಿ ಗಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದಿದ್ದು ಮಹಿಳೆಯನ್ನು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ನಿವೃತ್ತ ಸೈನಿಕನಿಗೆ ಅದ್ದೂರಿ ಸ್ವಾಗತ

ತಾಲೂಕಿನ  ಮುರುಡೇಶ್ವರ ಜನತಾ ಕಾಲೊನಿಯ 21 ವರ್ಷದ ಮಹಿಳೆಯೊರ್ವರು ಕೆಲವು ದಿನಗಳ ಹಿಂದೆ ಹೊಟ್ಟೆನೋವು ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಅವರನ್ನು ಪರೀಕ್ಷಿಸಿದ ಸ್ತ್ರೀರೋಗ ತಜ್ಞ  ಡಾ. ಸಹನಕುಮಾರ್ ಹೊಟ್ಟೆಯಲ್ಲಿ  ಗಡ್ಡೆಯಾಗಿರುವದನ್ನು ಪತ್ತೆ ಹಚ್ಚಿದ್ದರು. ತೀವ್ರ ಹೊಟ್ಟೆ ನೋವು ಬಳಲುತ್ತಿದ್ದ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿರುವ ಅಂದಾಜು 5 ಕೆಜಿ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. ಚಿಕಿತ್ಸೆಯ ಬಳಿಕ ಮಹಿಳೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.