ಭಟ್ಕಳ: ತಾಲೂಕಿನ ಸಂತೆ ಮಾರುಕಟ್ಟೆ ರಸ್ತೆಯಲ್ಲಿರುವ ಶಿವಪ್ರಸಾದ ಹೊಟೇಲ್ ಶಟರ್ ಮುರಿದು ಕಳ್ಳರು ೩೩ ಸಾವಿರ ನಗದು ಕದ್ದು ಪರಾರಿಯಾದ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿರುವ ಮುಂಡಳ್ಳಿಯ ಈರಾ ನಾಯ್ಕ ಒಡೆತನದ ಹೊಟೇಲ್ ಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ೩೩ ಸಾವಿರ ನಗದು ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಹೊಟೇಲ್ ಗೆ ನುಗ್ಗುವ ಮೊದಲು ಕಳ್ಳರು ಹೊಟೇಲ್ ನ ಪಕ್ಕದಲ್ಲಿದ್ದ ಬಿ.ಬಿ.ಶೇಟ್ ಎನ್ನುವವರ ಮಿನಿ ಸೂಪರ್ ಮಾರ್ಕೆಟ್ ಅಂಗಡಿ ಹೊರಗಿದ್ದ ಸಿ.ಸಿ. ಕ್ಯಾಮರಾ ಒಡೆದಿದ್ದಾರೆ. ಆ ಅಂಗಡಿಯ ಶಟರ್ ಮುರಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ನಂತರ ಹೊಟೇಲ್ ಶಟರ್ ಮುರಿದು ಒಳಹೊಕ್ಕಿದ್ದಾರೆ. ಕಪಾಟಿನಲ್ಲಿದ್ದ ೩೩ ಸಾವಿರ ನಗದು ಹಣವನ್ನು ಕದ್ದೊಯ್ದಿದ್ದಾರೆ. ಈರ್ವರು ಕಳ್ಳರು ಮುಖವನ್ನು ಮುಚ್ಚಿಕೊಂಡು ಅಂಗಡಿಯ ಹೊರಗಿದ್ದ ಸಿಸಿ ಕ್ಯಾಮರಾ ಒಡೆದು ಹಾಕಿರುವುದು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ನಗರ ಠಾಣೆಗೆ ಅಂಗಡಿಯ ಮಾಲೀಕ ಈರಾ ನಾಯ್ಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೀನುಗಾರ ಸಾವು