ಭಟ್ಕಳ : ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರಿ ಚಿನ್ನ-ಬೆಳ್ಳಿ ಆಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಶಿರಾಲಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶಿರಾಲಿಯ ಚಿತ್ರಾಪುರ ರಸ್ತೆಯಲ್ಲಿರುವ ದಿನಕರ ಸಂಜೀವ ಆಚಾರಿಯವರ ಮನೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ಜು.೧೩ರಂದು ಬೆಳಿಗ್ಗೆ ೧೧.೩೦ರಿಂದ ೪.೪೫ರ ನಡುವಿನ ವೇಳೆಯಲ್ಲಿ ಕಳ್ಳತನ ನಡೆದಿದೆ.
ಮನೆಯ ಮುಖ್ಯ ಬಾಗಿಲಿನ ಕೊಂಡಿಯನ್ನು ಮುರಿದು ಮನೆಯೊಳಗೆ ಕಳ್ಳರು ಹೊಕ್ಕಿದ್ದಾರೆ. ಸುಮಾರು ೫೯,೦೦೦ ರೂಪಾಯಿ ಕಿಮ್ಮತ್ತಿನ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳನ್ನು ಕಳುವು ಮಾಡಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮೇಲಿನ ಖರ್ವಾದಲ್ಲಿ ‘ತಸಮಾತೀರ’; ಸುಶೀಲಾ ಚಿಟ್ಟಾಣಿಗೆ ಸಮ್ಮಾನ