ಭಟ್ಕಳ : ತಾಲೂಕಿನ ಶಕ್ತಿಕ್ಷೇತ್ರಗಳಲ್ಲೊಂದಾದ ಮಾರುಕೇರಿಯ ಹೂತ್ಕಳದ ಶ್ರೀ ಕ್ಷೇತ್ರ ಧನ್ವಂತರಿ ವಿಷ್ಣುಮೂರ್ತಿ ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಆಚರಿಸಲಾಯಿತು. ವರ್ಷಂಪ್ರತಿಯಂತೆ ಲೋಕಕಲ್ಯಾಣಾರ್ಥವಾಗಿ ಪ್ರಥಮ ಏಕಾದಶಿಯ ದಿನವಾದ ಬುಧವಾರದಂದು ಶ್ರೀ ಧನ್ವಂತರಿ ವಿಷ್ಣುವಿಗೆ ಲಕ್ಷ ತುಳಸಿ ಅರ್ಚನೆ ನಡೆಸಲಾಯಿತು.
ಲಕ್ಷ ತುಳಸಿ ಅರ್ಚನೆ : ಫೇಸ್ಬುಕ್ ರೀಲ್ / ಇನ್ಸ್ಟಾಗ್ರಾಂನಲ್ಲಿ ರೀಲ್
ಆಷಾಢ ಏಕಾದಶಿ ಪ್ರಯಕ್ತ ಬೆಳಿಗ್ಗೆ ವಿಘ್ನೇಶ್ವರ ದೇವರ ಸನ್ನಿಧಿಯಲ್ಲಿ ಅಭಿಷೇಕದೊಂದಿಗೆ ಸಹಸ್ರ ದೂರ್ವಾರ್ಚನೆ, ವಿಶೇಷ ಅಲಂಕಾರ ಪೂಜೆ ಹಾಗೂ ಧನ್ವಂತರಿಯಲ್ಲಿ ಶ್ರೀಸೂಕ್ತ, ಪುರುಷಸೂಕ್ತಾದಿ ವಿಶೇಷ ಅಭಿಷೇಕಗಳು, ಕಲ್ಪೋಕ್ತ ಸಹಸ್ರನಾಮ, ಲಕ್ಷ ತುಳಸಿ ಅರ್ಚನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆದರೆ, ಉಪಸ್ಥಿತರಿರುವ ಭಕ್ತರಿಗೆ ಮಧ್ಯಾಹ್ನ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದನ್ನೂ ಓದಿ : ಹೆರಾಡಿ ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ಟ ಇವರ ನೇತೃತ್ವದಲ್ಲಿ ವೇ.ಮೂ. ಸುಬ್ರಾಯ ಭಟ್ಟ, ಶ್ರೀಧರ ಭಟ್ಟ, ಸತೀಶ ಭಟ್ಟ, ಯೋಗೇಶ ಹೆಬ್ಬಾರ, ನಾರಾಯಣ ಉಪಾಧ್ಯಾಯ,ಸದಾಶಿವ ಭಟ್ಟ, ಗಣಪಯ್ಯ ಹೆಗಡೆ, ವೆಂಕಟ್ರಮಣ ಹೆಬ್ಬಾರ ಸೇರಿದಂತೆ ೫೦ಕ್ಕೂ ಅಧಿಕ ಪುರೋಹಿತರು ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರು ವಿಷ್ಣು ಸಹಸ್ರನಾಮ ಓದಿದರು. ಭಾರೀ ಮಳೆಯ ಮಧ್ಯೆಯೂ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಸಂಜೆ ಶಿವಶಾಂತಿಕಾ ಕಲಾವರ್ಧಕ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ತರಣಿಸೇನ ಕಾಳಗ ಯಕ್ಷಗಾನ ತಾಳಮದ್ದಲೆ ಪ್ರೇಕ್ಷಕರ ಮನರಂಜಿಸಿತು.