ಕಾರವಾರ : ೨೦೨೨-೨೩ರ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಸಶಸ್ತ್ರ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) (ಪುರುಷ & ತೃತೀಯ ಅಂಗ) 3064 ಹುದ್ದೆಗಳಿಗೆ ನೇಮಕಾತಿ ಕುರಿತು ಅರ್ಹ ಅಭ್ಯರ್ಥಿಗಳಿಗೆ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ (PST)&(PET) ಪರೀಕ್ಷೆ ಜುಲೈ ೨೨ ರಂದು ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅಂದು ಬೆಳಿಗ್ಗೆ ೭ ಗಂಟೆಗೆ ಧಾರವಾಡದ ಆರ್.ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಶಸ್ತ್ರ ಕಾನ್ಸ್‌ಟೇಬಲ್ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪ್ರವೇಶ ಪತ್ರವನ್ನು https://ksp.karnataka.gov.in ಅಥವಾ https://ksp-recruitment.in ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಪ್ರವೇಶ ಪತ್ರವನ್ನು ದೈಹಿಕ ಪರೀಕ್ಷೆ ದಿನದಂದು ಹಾಜರು ಪಡಿಸದೇ ಇದ್ದಲ್ಲಿ ದೈಹಿಕ ಪರೀಕ್ಷೆಗೆ ಒಳಪಡಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಶಿರೂರು ಗುಡ್ಡಕುಸಿತ ದುರ್ಘಟನೆ : ಪತ್ತೆಯಾಗದ ಕುಮಟಾದ ಜಗನ್ನಾಥ ನಾಯ್ಕ

ಆಮಿಷಕ್ಕೆ ಬಲಿಯಾಗಬೇಡಿ :
ಯಾರಾದರೂ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡುವ ದಲ್ಲಾಳಿಗಳ ವದಂತಿಗೆ ಕಿವಿಗೊಡದೆ ಇರುವಂತೆ ಸೂಚಿಸಲಾಗಿದೆ. ಅಂತಹ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಂ. ಕಾರವಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಸಂಪರ್ಕಕ್ಕಾಗಿ : 9480805200 ಅಥವಾ 08382-226550 (ಪೊಲೀಸ್ ಕಂಟ್ರೋಲ್ ರೂಂ. ಕಾರವಾರ) ಕರೆಮಾಡಬಹುದಾಗಿದೆ.

ಭ್ರಷ್ಟಾಚಾರದ ಕುರಿತು ದೂರುಗಳಿದ್ದಲ್ಲಿ ಈ ಕೆಳಕಂಡ ವಿಳಾಸಕ್ಕೆ ಅಥವಾ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.:
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ, ಕಾರ್ಲಟನ್ ಭವನ, ಅರಮನೆ ರಸ್ತೆ, – 560001. ದೂ. : 080-22943650.
ಅಥವಾ
ಪೊಲೀಸ್ ಉಪ ಮಹಾನಿರೀಕ್ಷಕರು, ನೇಮಕಾತಿ. ಕಾರ್ಲಟನ್ ಭವನ. ಅರಮನೆ ರಸ್ತೆ,-560001. ದೂ.: 080-22942261.