ಕುಮಟಾ: ಉತ್ತರ ಕನ್ನಡದಲ್ಲಿ ಗುಡ್ಡ ಕುಸಿತ ಉಂಟಾಗಿ ಮಾರಣ ಹೋಮದ ರೀತಿಯಲ್ಲಿ ಸಾವಾಗುತ್ತಿವೆ. ಸಾವಿರಾರು ಜನ ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಬಗ್ಗೆ ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಬೇರೆ ಎಲ್ಲಾದರೂ ಈ ರೀತಿ ಆಗಿದ್ದರೆ ತಕ್ಷಣ ಮುಖ್ಯಮಂತ್ರಿ ಸ್ಥಳದಲ್ಲಿರುತ್ತಿದ್ದರು ಎಂದು ಬಿಜೆಪಿ ಮುಖಂಡ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಯಲ್ಲಾಪುರ ತಾಲೂಕಿನ ಕಳಚೆ ದುರಂತ ಆದಾಗ ತಕ್ಷಣ ನಮ್ಮ ಜಿಲ್ಲೆಗೆ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಆಗಮಿಸಿದ್ದರು. ಕಾಂಗ್ರೆಸ್ ಸರಕಾರಕ್ಕೆ ಜನರ ವೋಟ್ ಮಾತ್ರ ಬೇಕು, ನಾವು ೪ ಜನ ಕಾಂಗ್ರೆಸ್ ಶಾಸಕರನ್ನು ಕೊಟ್ಟಿದ್ದೇವೆ. ಜನರ ಹಿತ ನಿಮಗೆ ಬೇಕಾಗಿಲ್ಲ, ನಿಮಗೆ ಕನಿಕರ ಇದೆಯೇ? ಪಾಪ ಮಂಕಾಳ ವೈದ್ಯರ ಜೊತೆ ಯಾವ ಮಂತ್ರಿಯೂ ಬರುತ್ತಿಲ್ಲ, ಚುಣಾವಣೆ ಬಂದಾಗ ಮಾತ್ರ ಬರುತ್ತೀರಾ? ಈಗ ಬರಲಿಕ್ಕೆ ಏನಾಗಿದೆ ನಿಮಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಜಿಲ್ಲೆಗೆ ಸಿಎಂ ಬಂದು ಶಾಶ್ವತ ಪರಿಹಾರ ಕಲ್ಪಿಸಲಿ : ಈಶ್ವರ ನಾಯ್ಕ
ಜೆಲ್ಲೆಯ ಎಲ್ಲ ಶಾಸಕರು ತಕ್ಷಣ ಕ್ಷೇತ್ರಕ್ಕೆ ಬರಬೇಕು, ಜನರ ಕಷ್ಟಕ್ಕೆ ಸ್ಪಂದಿಸಬೇಕು. ನಮ್ಮ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈಗಾಗಲೆ ವೀಕ್ಷಣೆ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ದಿನಕರ ಶೆಟ್ಟಿರವರು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ,
ಐ.ಆರ್.ಬಿ. ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಹಿಂದೆ ಮಂಕಾಳ ವೈದ್ಯರು, ಸತೀಶ್ ಸೈಲ್ ಎಲ್ಲರೂ ಐ.ಆರ್.ಬಿ. ವಿರುದ್ಧ ಧ್ವನಿ ಎತ್ತಿ ನಂತರ ಸೈಲೆಂಟ್ ಆಗಿದ್ದೇ ಇಷ್ಟೊಂದು ಅನಾಹುತಕ್ಕೆ ಕಾರಣ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ : ಮನೆಯಂಗಳದಲ್ಲಿ ೭ ಅಡಿ ಉದ್ದದ ಹೆಬ್ಬಾವು ಪತ್ತೆ
ಉತ್ತರ ಕನ್ನಡ ಜಿಲ್ಲೆ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಬಿಡಬೇಕು. ತಕ್ಷಣ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹೆಲಿಕಾಪ್ಟರ್ ಮುಖಾಂತರ ಉತ್ತರ ಕನ್ನಡ ಜಿಲ್ಲೆಗೆ ಬರಬೇಕು, ಅಲ್ಲೇ ಕುಳಿತು ೫ ಲಕ್ಷ ಪರಿಹಾರ ಘೋಷಣೆ ಮಾಡಿದರೆ ಏನೂ ಪ್ರಯೋಜನ ಇಲ್ಲ. ಜನರ ಜೀವಕ್ಕೆ ಬೆಲೆ ಕಟ್ಟುತ್ತಿದ್ದೀರಾ? ಸಾವಿರಾರು ಜನ ಮನೆ ಜಮೀನು ಕಳೆದುಕೊಂಡಿದ್ದನ್ನ ಹೆಲಿಕಾಪ್ಟರ್ ಮೂಲಕ ವೀಕ್ಷಣೆ ಮಾಡಬೇಕು. ತಕ್ಷಣ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು ಎಂದು ಅನಂತ ಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗಜಾನನ ಪೈ , ವಿನಾಯಕ ನಾಯ್ಕ, ಉಮೇಶ್ ಹರಿಕಂತ್ರ ಉಪಸ್ಥಿತರಿದ್ದರು.