ಅಂಕೋಲಾ : ಇಂದು (ಜುಲೈ ೨೧) ಗುಡ್ಡಕುಸಿತದ ಪ್ರದೇಶವಾದ ಅಂಕೋಲಾದ ಶಿರೂರು ಹಾಗೂ ಉಳುವರೆ ಕಾಳಜಿ ಕೇಂದ್ರಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ದೂರಿದ್ದಾರೆ(Complaint).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ರಾಜ್ಯಾಧ್ಯಕ್ಷರು ಅಂಕೋಲಾ(ankola)ಕ್ಕೆ ಬಂದ ವೇಳೆ ಅವರಿಗೆ ಮಾಜಿ ಶಾಸಕ ಸುನೀಲ ನಾಯ್ಕ ಸಹಿತ ಬಿಜೆಪಿಯ ಶಾಸಕರು, ಮಾಜಿ ಶಾಸಕರು, ಮುಖಂಡರು ಸಾಥ್ ನೀಡಿದರು. ಸಂತ್ರಸ್ತರನ್ನು ಭೇಟಿ ಮಾಡಿದ ರಾಜ್ಯಾಧ್ಯಕ್ಷರಿಗೆ ಮುಖಂಡರು ಜಿಲ್ಲೆಯ ಸ್ಥಿತಿಗತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ವಿಡಿಯೋ ಸಹಿತ ಇದನ್ನೂ ಓದಿ : ಶಿರೂರು, ಉಳುವರೆ ಗ್ರಾಮಕ್ಕೆ ಬಿ.ವೈ. ವಿಜಯೇಂದ್ರ ಭೇಟಿ
ಈ ಸಂದರ್ಭದಲ್ಲಿ ಹೊನ್ನಾವರ(Honnavara) ತಾಲೂಕಿನಲ್ಲೂ ನೆರೆಹಾವಳಿಯಿಂದ ಅಪಾರ ಆಸ್ತಿ ಪಾಸ್ತಿ ಹಾನಿ ಆಗಿರುವ ಬಗ್ಗೆ ಮಾಜಿ ಶಾಸಕ ಸುನೀಲ ನಾಯ್ಕ ರಾಜ್ಯಾದ್ಯಕ್ಷರ ಗಮನಕ್ಕೆ ತಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆರೆಹಾವಳಿ ಸಂತ್ರಸ್ತರಿಗೆ ಮನೆ ಸ್ವಚ್ಛತೆಗೊಳಿಸಲು ತಕ್ಷಣ ೧೦ ಸಾ.ರೂ. ಹಾಗೂ ಮನೆ ಕಳೆದುಕೊಂಡವರಿಗೆ ನೂತನ ಮನೆ ನಿರ್ಮಾಣಕ್ಕಾಗಿ ೫ ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿತ್ತು. ಮನೆ ನಿರ್ಮಾಣಕ್ಕೆಂದು 1 ಲಕ್ಷ ರೂಪಾಯಿ ಮೊದಲ ಕಂತನ್ನು ತಕ್ಷಣ ಸಂತ್ರಸ್ತ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಆದರೆ ಈಗ ತಮ್ಮ ಕ್ಷೇತ್ರದಲ್ಲಿ ಕಳೆದ ೧೫ ದಿನಗಳಿಂದ ನೆರೆಹಾವಳಿ ಅವಾಂತರ ಸೃಷ್ಟಿಯಾಗಿದೆ. ಒಂದು ರೂಪಾಯಿಯನ್ನೂ ಕೂಡ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಸುನೀಲ ನಾಯ್ಕ ದೂರಿದ್ದಾರೆ (complaint).
ವಿಡಿಯೋ ಸಹಿತ ಇದನ್ನೂ ಓದಿ : ಮರಕ್ಕೆ ಡಿಕ್ಕಿ ಹೊಡೆದ ಬಸ್; ಚಾಲಕನ ಕಾಲು ಕಟ್
ಸಂತ್ರಸ್ತರ ಅಹವಾಲು ಆಲಿಸಿದ ರಾಜ್ಯಾಧ್ಯಕ್ಷರು ಸಂತ್ರಸ್ತರ ಹಾಗೂ ಸಾರ್ವಜನಿಕರ ಆಕ್ರಂದನಕ್ಕೆ ಮರುಕಪಟ್ಟರು. ಕೂಡಲೇ ಪರಿಹಾರ, ಮನೆ ನಿರ್ಮಾಣಕ್ಕೆ ನೆರವು ನೀಡಲು ಸರ್ಕಾರಕ್ಕೆ ಆಗ್ರಹಿಸುವುದಾಗಿ ಹೇಳಿದ್ದಾರೆಂದು ಮಾಜಿ ಶಾಸಕ ಸುನೀಲ ನಾಯ್ಕ ತಿಳಿಸಿದ್ದಾರೆ.