ಭಟ್ಕಳ : ಇಲ್ಲಿನ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ (AITM) ಪ್ರಾಧ್ಯಾಪಕ ಕಿರಣ್ ವಿನಾಯಕ ಶಾನಭಾಗ ಪಿ ಎಚ್ ಡಿ ಪದವಿ(PhD degree) ಪಡೆದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

AITM ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಕಿರಣ್ ವಿನಾಯಕ ಶಾನಭಾಗ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ (PhD degree)ಯನ್ನು ಪಡೆದಿದ್ದಾರೆ. ಜುಲೈ ೧೮ ರಂದು ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೪ ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ.

ಇದನ್ನೂ ಓದಿ : ನದಿಯಲ್ಲಿನ‌ ಮಣ್ಣು ತೆರವು ಕಾರ್ಯಾಚರಣೆ ಚುರುಕು

ಇವರು ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥರಾದ ಡಾ. ದಯಾಕ್ಷಿಣಿ ಎಸ್. ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. “5G ಉಪಯುಕ್ತತೆ ಕಡೆಗೆ ಬಹುವಾಹಕ ಸಮನ್ವಯತೆ ಯೋಜನೆಗಳಲ್ಲಿ ಸಂಭಾವ್ಯ ವರ್ಧನೆಗಳು” (“Potential Enhancements in Multicarrier Modulation Schemes Towards 5G Applications”) ಎಂಬ ಪ್ರಬಂಧವನ್ನು ಅವರು ಮಂಡಿಸಿದ್ದರು.

ಇದನ್ನೂ ಓದಿ : ಭಟ್ಕಳದ ನಾರಾಯಣ ನಾಯ್ಕರಿಗೆ ಡಾಕ್ಟರೇಟ್

ಹೊನ್ನಾವರದ ವಿನಾಯಕ ಶಾನಭಾಗ್ ಹಾಗೂ ವಿನಯಾ ಶಾನಭಾಗ್ ಅವರ ಪುತ್ರರಾದ ಕಿರಣ್ ಅವರು ಎಐಟಿಎಂನಲ್ಲಿ  ಇಂಜಿನಿಯರಿಂಗ್ ಶಿಕ್ಷಣ ಮುಗಿಸಿದ್ದಾರೆ. ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ೨೦೦೫ ರಿಂದ ಎಐಟಿಎಂನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಆಗಸ್ಟ್ ೨೦೨೩ ರಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.

 

ಇದನ್ನೂ ಓದಿ : ೮ ದಿನಗಳ ಬಳಿಕ ಮಹಿಳೆ ಶವವಾಗಿ ಪತ್ತೆ

ಅವರ ಈ ಮಹತ್ವದ ಸಾಧನೆಗಾಗಿ ಎಐಟಿಎಂನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ. ಕೆ. ಫಜಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗ ಡಾ. ಕಿರಣ್ ಶಾನಭಾಗ ಅವರನ್ನು ಅಭಿನಂದಿಸಿದ್ದಾರೆ.