ಯಲ್ಲಾಪುರ : ಬನವಾಸಿಯ ಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗವಳ್ಳಿ ಗ್ರಾಮದಲ್ಲಿ ವರದಾನದಿ ನೀರು ರೈತರ ಹೊಲಗಳಿಗೆ ನುಗ್ಗಿ ನೆರೆ ಉಂಟಾದ ಪ್ರದೇಶಗಳಿಗೆ ಬಿಜಿಪಿಯ ಪ್ರಮುಖರು ಮತ್ತು ಕಾರ್ಯಕರ್ತರ ತಂಡ(BJP Team) ಭೇಟಿ ನೀಡಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸೂಚನೆಯಂತೆ ಸ್ಥಳಕ್ಕೆ ತೆರಳಿದ ತಂಡ ಸ್ಥಳೀಯರೊಂದಿಗೆ ನೆರೆ ಕುರಿತು ಮಾಹಿತಿ ಪಡೆದು, ಅಹವಾಲು ಸ್ವೀಕರಿಸಿ, ಚರ್ಚಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಕಳೆದ ವಾರ ಸುರಿದ ಭೀಕರ ಮಳೆಯಿಂದಾಗಿ ವರದಾ ನದಿ ತುಂಬಿ ಹರಿಯುತ್ತಿದೆ. ಬನವಾಸಿ(Banavasi) ಭಾಗದ ಮೊಗವಳ್ಳಿ ಗ್ರಾಮ ಹಾಗೂ ಸುತ್ತಲಿನ ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಹೊಲಗಳಲ್ಲೆಲ್ಲ ಇನ್ನೂ ನೀರು ತುಂಬಿಕೊಡಿದ್ದು, ಅಪಾರ ಪ್ರಮಾಣದ ಭತ್ತ ಮತ್ತು ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿದೆ.

ಇದನ್ನೂ ಓದಿ :  ಸಿಎಸ್‌ಇಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಅಲ್ಲಿಯ ಸಮಸ್ಯೆ, ಹಾನಿ ಮತ್ತು ಪರಿಹಾರೋಪಾಯಗಳ ಕುರಿತು ಸ್ಥಳೀಯರೊಂದಿಗೆ ಬಿಜೆಪಿ ತಂಡ(BJP Team)ದ ಸದಸ್ಯರು ಚರ್ಚೆನಡೆಸಿದರು. ಭೇಟಿ ನೀಡಿದ ತಂಡದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ(Hariprakash Konemane), ಪಕ್ಷದ ಪ್ರಮುಖರಾದ ಎಲ್.ಟಿ. ಪಾಟೀಲ, ಉಮೇಶ ಭಾಗ್ವತ, ಉಷಾ ಹೆಗಡೆ, ಮಂಜುನಾಥ ಪಾಟೀಲ, ಪ್ರೇಮ ಕುಮಾರ, ಅರವಿಂದ ಶೆಟ್ಟಿ, ಮಂಜುನಾಥ ನಾಯ್ಕ, ಗಣೇಶ ಸಣ್ಣಲಿಂಗಣ್ಣನವರ, ವಿಶ್ವನಾಥ್ ಹಾದಿಮನಿ, ರಾಘವೇಂದ್ರ ಭಟ್ ಹಾಸಣಗಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರು, ಶಕ್ತಿಕೇಂದ್ರ ಮತ್ತು ಬೂತ್ ಪ್ರಮುಖರು ಇದ್ದರು.

ನಮ್ಮ ತಂಡವು ಸಂಸದರ ಸೂಚನೆಯ ಮೇರೆಗೆ ನೆರೆಯಿಂದಾದ ಹಾನಿ ಮತ್ತು ಸಮಸ್ಯೆ ಅರಿಯಲು ಬಂದಿದ್ದೇವೆ; ಸಂಸದರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಸಂಸತ್ ಅಧಿವೇಶನ ಮುಗಿದ ಬಳಿಕ ಸಂಸದರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಪ್ರತಿ ವರ್ಷ ನೆರೆಯಿಂದಾಗುವ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಕೈಗೊಳ್ಳುವಂತೆ ಮಾಡಲಾಗುವುದು.  ಸರ್ಕಾರ ಕೂಡಲೇ ಇಲ್ಲಿಯ ಹಾನಿ ಪರೀಶೀಲನೆ ನಡೆಸಿ ಸೂಕ್ತ ಪರಿಹಾರೋಪಾಯ ಕೈಗೊಳ್ಳಬೇಕು.

ಹರಿಪ್ರಕಾಶ ಕೋಣೆಮನೆ, ಬಿಜೆಪಿ ರಾಜ್ಯ ವಕ್ತಾರ